ಜಿಲ್ಲೆಯಲ್ಲಿವೆ ಅತ್ಯಧಿಕ ಲಯನ್ಸ್ ಸಂಸ್ಥೆ: ಜಿಲ್ಲಾ ಸಂಪುಟ ಸಲಹೆಗಾರ ಕೆ.ದೇವೇಗೌಡ ಹೇಳಿಕೆ

Pledge Teaching Ceremony Mandya
Published on

ಮಂಡ್ಯ: ಸೇವಾ ಮತ್ತು ಸ್ನೇಹಪರತೆಯೇ ಲಯನ್ಸ್ ಸಂಸ್ಥೆಗಳ ಪ್ರಮುಖ ಧ್ಯೇಯ ಎಂದು ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆ ಜಿಲ್ಲಾ ಸಂಪುಟ ಸಲಹೆಗಾರ ಕೆ.ದೇವೇಗೌಡ ಹೇಳಿದರು.

ನಗರದ ಕರ್ನಾಟಕ ಸಂಘದ ಕೆವಿಎಸ್ ಭವನದಲ್ಲಿ ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆ ಜಿಲ್ಲೆ 317 ಜಿ ಪ್ರಾಂತ್ಯ 9 ಹಾಗೂ ಮಂಡ್ಯ ಮಧುರ ಲಯನ್ಸ್ ಸಂಸ್ಥೆ ಮತ್ತು ಮಂಡ್ಯ ಇಂಜಿನಿಯರ್ಸ್ ಲಯನ್ಸ್ ಸಂಸ್ಥೆ ಆಯೋಜಿಸಿದ್ದ ಪದಗ್ರಹಣ ಮತ್ತು ಪ್ರತಿಜ್ಞಾವಿಧಿ ಬೋಧನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆಯ ಸೇವಾ ಕಾರ್ಯಗಳು ವಿಶ್ವವ್ಯಾಪ್ತಿಯಾಗಿವೆ. ವಿಶ್ವಸಂಸ್ಥೆಯು ಪ್ರಶಂಸೆ ವ್ಯಕ್ತಡಿಸುವಷ್ಟು ಸೇವಾ ಚಟುವಟಿಕೆಗಳು ನಿರಂತರವಾಗಿ ಸಾಗುತ್ತಿವೆ. ಇಡೀ ಭಾರತದಲ್ಲಿ ಮಂಡ್ಯ ಜಿಲ್ಲೆಯಲ್ಲಿ ಅತ್ಯಧಿಕ ಲಯನ್ಸ್ ಸಂಸ್ಥೆಯ ತಂಡಗಳು, ಸದಸ್ಯರ ಸೇವಾಕಾರ್ಯ ಸಾಗುತ್ತಿವೆ. ನಾವು ಜಿಲ್ಲಾ ಪ್ರಾಂತಪಾಲನಾಗಿದ್ದ ಅವಧಿಯಲ್ಲಿ 3 ಲಯನ್ಸ್ ತಂಡಗಳಿದ್ದವು. ಇಂದು 42 ಸಂಸ್ಥೆಗಳಿವೆ. ಗ್ರಾಮೀಣ ರೈತಾಪಿ ಕುಟುಂಬಗಳೇ ಆವರಿಸಿಕೊಂಡಿರುವಂತ ರೈತಮಕ್ಕಳೇ ಸದಸ್ಯರಾಗಿ ಸೇವಾಕಾರ್ಯಕ್ಕೆ ನಾಂದಿಯಾಗಿದ್ದಾರೆ. ಈ ಮೂಲಕ ನೊಂದವರು ಹಾಗೂ ಅಗತ್ಯಯುಳ್ಳವರಿಗೆ ನೆರವಾಗುತ್ತಿರುವುದು ಶ್ಲಾಘನೀಯ ಎಂದರು.

ಮಂಡ್ಯ ಮಧುರ ಲಯನ್ಸ್ ಸಂಸ್ಥೆ ನಿಕಟಪೂರ್ವ ಅಧ್ಯಕ್ಷ ಸಿ.ತ್ಯಾಗರಾಜು, ನೂತನ ಅಧ್ಯಕ್ಷ ಎಂ.ವಿನಯಕುಮಾರ್, ಮಲ್ಟಿಪಲ್ ಕೌನ್ಸಿಲ್ ಚೇರ್ಮನ್ ಡಾ.ಎನ್.ಕೃಷ್ಣೇಗೌಡ, 1ನೇ ಉಪ ಜಿಲ್ಲಾ ಪ್ರಾಂತಪಾಲ ಕೆ.ಎಲ್.ರಾಜಶೇಖರ್, 2ನೇ ಜಿಲ್ಲಾ ಉಪ ಪ್ರಾಂತಪಾಲ ಮತಿದೇವ ಕುಮಾರ್, ಮಂಡ್ಯ ಇಂಜಿನಿಯರ್ಸ್ ಲಯನ್ಸ್ ಸಂಸ್ಥೆ ಅಧ್ಯಕ್ಷ ಡಿ.ಸಿ.ಚಂದ್ರೇಗೌಡ, ಜಿಲ್ಲಾ ರಾಯಬಾರಿ ವಿ.ಹರ್ಷ, ಸಂಪುಟ ಖಜಾಂಚಿ ಪುನೀತ್‌ಕುಮಾರ್, ವಿಶೇಷ ಕಾರ್ಯದರ್ಶಿ ಆನಂದ್, ಪ್ರಾಂತೀಯ ಅಧ್ಯಕ್ಷ ಶ್ರೀಧರ್, ವಲಯಾಧ್ಯಕ್ಷ ಕೆಂಪರಾಜು, ಅನಂತ್ ಕುಮಾರ್, ಜೀವನ್‌ಕುಮಾರ್, ನಂದೀಶ್‌ಕುಮಾರ್, ದೇವೇಗೌಡ, ಮುತ್ತಗೆರೆ ಮಂಜು ಇತರರಿದ್ದರು.

ಇದೇ ಸಂದರ್ಭದಲ್ಲಿ ವಿವಿಧ ಸರ್ಕಾರಿ ಶಾಲೆಗಳಿಗೆ ಪರಿಕರ ಮತ್ತು ಅಗತ್ಯಯುಳ್ಳವರಿಗೆ ಆರ್ಥಿಕ ನೆರವು ನೀಡಲಾಯಿತು. ಹಲವು ವರ್ಷದಿಂದ ಲಯನ್ಸ್ ಸಂಸ್ಥೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net