

ಲಕ್ಷೆ್ಮೕಶ್ವರ: ಮರಣದ ನಂತರ ಸುಟ್ಟರೆ ಬೂದಿಯಾಗಿ, ಹೂತರೆ ಮಣ್ಣಲ್ಲಿ ಮಣ್ಣಾಗುವ ದೇಹ ಮತ್ತೊಬ್ಬರ ಬದುಕಿಗೆ ಆಸರೆಯಾಗಲಿ ಮತ್ತು ವೈದ್ಯಕೀಯ ವಿದ್ಯಾರ್ಥಿಗಳ ಸಂಶೋಧನೆಗೆ ಅನುಕೂಲವಾಗಲಿ ಎಂಬ ಸದುದ್ದೇಶದಿಂದ ಮರಣಾನಂತರ ದೇಹದಾನ ಮಾಡಲು ಸ್ವಯಂಪ್ರೇರಿತವಾಗಿ ಒಪ್ಪಿಕೊಂಡಿದ್ದೇವೆ ಎಂದು ನಿವೃತ್ತ ಶಿಕ್ಷಕ ಪೂರ್ಣಾಜಿ ಖರಾಟೆ ಹೇಳಿದರು.
ಪಟ್ಟಣದಲ್ಲಿ ಈ ಕುರಿತು ಮಂಗಳವಾರ ಮಾಹಿತಿ ನೀಡಿದ ಅವರು, ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯ ದೇಹದಾನ ಸಂಘ-ಅಂಗರಚನಾ ಶಾಸಣಉ ವಿಭಾಗಕ್ಕೆ ಸ್ವಯಂಪ್ರೇರಿತವಾಗಿ ದೇಹದಾನದ ಪ್ರತಿಜ್ಞೆ ಮಾಡಿದ್ದೇನೆ. ದೇಹವನ್ನು ವೈದ್ಯಕೀಯ ವಿದ್ಯಾರ್ಥಿಗಳ ಜ್ಞಾನಾರ್ಜನೆ ಮತ್ತು ಸಂಶೋಧನೆಗೆ ಕೊಡಲು ನಿರ್ಧರಿಸಿದ್ದೇನೆ. ಮರಣಾ ನಂತರ ಕಿಡ್ನಿ, ಕಣ್ಣು, ಹೃದಯ ಸೇರಿ ಕೆಲ ಮನುಷ್ಯನ ಅಂಗಾಂಗಗಳನ್ನು ಅಪಘಾತಕ್ಕೀಡಾದವರು ಮತ್ತು ರೋಗಿಗಳಿಗೆ ಜೋಡಿಸುವುದರಿಂದ ಅಂಥವರ ಬಾಳಿಗೆ ಬೆಳಕಾಗುತ್ತದೆ ಎಂದರು. ವಿಶ್ವನಾಥ ಖರಾಟೆ, ಇತರರಿದ್ದರು.