ಪ್ಲೀಸ್ ನಂಬಿ.... ಇದು ಕೆರೆಯಲ್ಲ... ರಸ್ತೆ

Bankapur Road Filled with water due to heavy rain
Published on

ಮುಂಡಗೋಡ: ಬುಧವಾರ ಮಧ್ಯಾಹ್ನ ಅರ್ಧತಾಸಿಗೂ ಅಧಿಕ ಸಮಯ ಸುರಿದ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ಥಗೊಂಡಿದ್ದು, ಪಟ್ಟಣದ ಬಂಕಾಪುರ ರಸ್ತೆಯಲ್ಲಿ ನೀರು ನಿಂತು ಕೆಲ ಸಮಯ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಯಿತು.

ಮಧ್ಯಾಹ್ನ 3.30ಕ್ಕೆ ಆರಂಭವಾದ ಮಳೆ ಅರ್ಧ ತಾಸಿಗೂ ಅಧಿಕ ಸಮಯ ಧಾರಾಕಾರವಾಗಿ ಸುರಿಯಿತು. ಪಟ್ಟಣದ ಚರಂಡಿಗಳೆಲ್ಲ ತುಂಬಿ ರಸ್ತೆಯ ಮೇಲೆ ನೀರು ಹರಿಯುತ್ತಿರುವುದು ಕಂಡು ಬಂದಿತು.

ಪಟ್ಟಣದ ಬಂಕಾಪುರ ರಸ್ತೆಯಲ್ಲಿನ ಚರಂಡಿಗಳು ನೀರು ತುಂಬಿ ರಸ್ತೆಯ ಮೇಲೆ ಅಪಾರ ಪ್ರಮಾಣದ ನೀರು ನಿಂತು, ನೋಡುಗರಿಗ ಕೆರೆಯಂತೆ ಭಾಸವಾಗುತ್ತಿತ್ತು. ಇದೇ ವೇಳೆ ಚರಂಡಿಯಲ್ಲಿ 2-3 ಹಾವುಗಳು ಸಹ ನೀರಿನಲ್ಲಿ ತೆಲಿ ಬಂದು ಸಾರ್ವಜನಿಕರಲ್ಲಿ ಭಯ ಹುಟ್ಟಿಸಿದವು. ರಸ್ತೆಯ ಮೇಲೆ ನೀರು ನಿಂತು ಪರಿಣಾಮ ಬೈಕ್ ಸವಾರರು ವಾಹನ ಚಲಾಯಿಸಲು ಪರದಾಡುವಂತಾಯಿತು.

ನಂತರ ಪೌರ ಕಾರ್ವಿುಕರು ಸ್ಥಳಕ್ಕಾಗಮಿಸಿ ಚರಂಡಿಗಳಲ್ಲಿನ ಕಸವನ್ನು ತೆಗೆದು ಸರಾಗವಾಗಿ ನೀರು ಹರಿದು ಹೋಗುವಂತೆ ಮಾಡಿದರು. ನಂತರ ನಿಧಾನವಾಗಿ ನೀರು ಹರಿದು ಹೋಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net