ಪ್ರಚೋದನಾಕಾರಿ ಹೇಳಿಕೆಗೆ ಖಂಡನೆ; ಪ್ರಮೋದ ಮುತಾಲಿಕ್ ಗಡಿಪಾರಿಗೆ ಮನವಿ

web
Published on

ಧಾರವಾಡ: ಮುಸ್ಲಿಂರ ಬಗ್ಗೆ ಅವಹೇಳನಕಾರಿ ಮಾತನಾಡಿರುವ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ್ ಗಡಿಪಾರಿಗೆ ಆಗ್ರಹಿಸಿ ನಗರದ ಅಂಜುಮನ್ ಇಸ್ಲಾಂ ಸಂಸ್ಥೆಯ ಪದಾಧಿಕಾರಿಗಳು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಇತ್ತೀಚೆಗೆ ಮನವಿ ರವಾನಿಸಿದ್ದಾರೆ.
ಮುಂಬರುವ ದಿನಗಳಲ್ಲಿ ಎಲ್ಲ ಮಸೀದಿಗಳಲ್ಲಿ ಶ್ರೀ ಗಣೆಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುವುದು. ಮುಸ್ಲಿಂರು ದೇಶದ್ರೋಹಿಗಳು, ನೀಚರು ಹಾಗೂ ಹಿಂದು ದ್ರೋಹಿಗಳು ಎಂದು ಮುತಾಲಿಕ್ ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ. ಈ ಮೂಲಕ ಹಿಂದು- ಮುಸ್ಲಿಂರ ನಡುವೆ ಕೋಮು ದ್ವೇಷ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಅವರನ್ನು ರಾಜ್ಯದಿಂದ ಗಡಿಪಾರು ಮಾಡಬೇಕು. ಕಾನೂನು ಕ್ರಮ ಕೈಗೊಳ್ಳದಿದ್ದರೆ ಮುಸ್ಲಿಂ ಸಮಾಜದಿಂದ ಬೃಹತ್ ಹೋರಾಟ, ಕಾನೂನು ಹೋರಾಟ ಮಾಡಲಾಗುವುದು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಅಂಜುಮನ್ ಸಂಸ್ಥೆಯ ಅಧ್ಯಕ್ಷ ಇಕ್ಬಾಲ ಜಮಾದಾರ, ಕಾರ್ಯದರ್ಶಿ ನಜೀರಹುಸೇನ್ ಮನಿಯರ ಸದಸ್ಯರಾದ ಎಸ್.ಎ. ಸರಗಿರೋ, ಶೋಯೆಬ್ ಜಮಾದಾರ, ರಿಯಜ್‌ಅಹ್ಮದ್ ನನ್ನೆಸಾಬನವರ, ರಫೀಕ್ ಬಿಸ್ತಿ, ಖಲೀಲ ದಾಸನಕೊಪ್ಪ, ಬಶೀರ್‌ಅಹ್ಮದ್ ಜಹಗೀರದಾರ, ಜಮಾತ್‌ನ ಮುತವಲ್ಲಿಗಳು, ಧಾರ್ಮಿಕ ಮುಖಂಡರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net