ಮುಳಬಾಗಿಲು ಪಿಎಲ್​ಡಿ ಕೈ ವಶ

FotoJet
Published on

ಮುಳಬಾಗಿಲು: ತಾಲೂಕಿನ ಪಿಎಲ್​ಡಿ ಬ್ಯಾಂಕ್​ ಅಧ್ಯಕ್ಷರಾಗಿ ಕೊತ್ತೂರು ಗಂಗಿರೆಡ್ಡಿ ಹಾಗೂ ಉಪಾಧ್ಯಕ್ಷರಾಗಿ ಮಂಡಿಕಲ್ಲು ಎಂ.ಎಸ್​. ಮಂಜುನಾಥ್​ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಬಿ.ಆರ್​.ಶಿವಶಂಕರ್​ ಘೋಷಿಸಿದರು.

ನೂತನ ಅಧ್ಯಕ್ಷ ಗಂಗಿರೆಡ್ಡಿ ಮಾತನಾಡಿ, ಪಿಎಲ್​ಡಿ ಬ್ಯಾಂಕ್​ ಅಭಿವೃದ್ಧಿಗಾಗಿ ಎಲ್ಲರೂ ಸಹಕಾರ ನೀಡಬೇಕು

ಎಂದು ಮನವಿ ಮಾಡಿದರು.

ಪಿಎಲ್​ಡಿ ಬ್ಯಾಂಕ್​ ನಿರ್ದೇಶಕರಾದ ಅಲಂಗೂರು ಶಿವಣ್ಣ, ಮರಕಲಘಟ್ಟ ಎಂ.ಎನ್​. ಶಂಕರನಾರಾಯಣ, ರಾಜೇಂದ್ರಹಳ್ಳಿ ಆರ್​.ಆರ್​.ರಾಜೇಂದ್ರ ಗೌಡ, ಉತ್ತನೂರು ಶ್ರೀನಿವಾಸ್​, ಎಚ್​.ಗೊಲ್ಲಹಳ್ಳಿ ಕೆ.ಸತೀಶ್​, ರಚ್ಚಬಂಡಹಳ್ಳಿ ಶ್ರೀರಾಮಪ್ಪ, ಕರಡಗೂರು ಶ್ರೀನಿವಾಸ, ಮಲ್ಲನಾಯಕನಹಳ್ಳಿ ಮುನಿವೆಂಕಟಮ್ಮ ಇದ್ದರು.

ಪ್ರಮಾಣ ಪತ್ರ ಹರಿದು ಆಕ್ರೋಶ: ಆವಣಿ ಸಾಮಾನ್ಯ ಕ್ಷೇತ್ರದ ನಿರ್ದೇಶಕ ಎಂ.ಎನ್​.ಶಂಕರನಾರಾಯಣ ಅವರು ತಮಗೆ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್​ ಮುಖಂಡರು ಸಹಕಾರ ನೀಡಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು. ಚುನಾವಣೆ ಅಧಿಕಾರಿ ನೀಡಲು ಬಂದ ಪ್ರಮಾಣ ಪತ್ರವನ್ನೇ ಹರಿದು ಕಾಂಗ್ರೆಸ್​ ಸ್ಥಳಿಯ ಮುಖಂಡರ ವಿರುದ್ಧ

ಆಕ್ರೋಶ ವ್ಯಕ್ತಪಡಿಸಿದರು.

ಜೆಡಿಎಸ್​ಗೆ ನಿರಾಸೆ: ಈ ಹಿಂದೆ ನಡೆದ ನಿರ್ದೇಶಕರ ಸ್ಥಾನ ದ ಚುನಾವಣೆಯಲ್ಲಿ ಕಾಂಗ್ರೆಸ್​ ಮತ್ತು ಜೆಡಿಎಸ್​ ನಡುವೆ ಪೈಪೋಟಿ ನಡೆದಿತ್ತು. ಆದರೆ, ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳು ಕಾಂಗ್ರೆಸ್​ ತೆಕ್ಕೆಗೆ ಸೇರಿರುವುದು ಜೆಡಿಎಸ್​ಗೆ ನಿರಾಸೆ ಉಂಟುಮಾಡಿದೆ. ಮ್ಯಾಜಿಕ್​ ನಂಬರ್​ ಸಿಗದ ಕಾರಣ ಜಿ.ಆನಂದರೆಡ್ಡಿ ಅವರು ತಮ್ಮ ಪುತ್ರ ಎ.ಭರತ್​ ಅವರನ್ನು ಕಣದಿಂದ ಹಿಂದಕ್ಕೆ ಸರಿದಿದ್ದು, ಜೆಡಿಎಸ್​ ಬೆಂಬಲದೊಂದಿಗೆ ಗೆದ್ದಿದ್ದ ಕಾಂಗ್ರೆಸ್​ ಬಂಡಾಯ ಅಭ್ಯರ್ಥಿ ಎಂ.ಎಸ್​. ಮಂಜುನಾಥ್​ ಕಾಂಗ್ರೆಸ್​ ಪಾಳೆ ಸೇರಿಕೊಂಡಿದ್ದು, ಹಾಗೂ ಮೂವರು ನಿರ್ದೇಶಕರು ಬೆಂಬಲ ಸಿಗಬಹುದೆಂಬ ನಿರೀಕ್ಷೆ ಹುಸಿಯಾಗಿದೆ. ಜೆಡಿಎಸ್​ ಬೆಂಬಲಿತ ನಿರ್ದೇಶಕರಾದ ಶಿನಿಗೇನಹಳ್ಳಿ ಎ. ಭರತ್​, ಸೋಮೇಶ್ವರಪಾಳ್ಯದ ಎಂ. ಪಿ. ಭಾಗ್ಯ ಲಕ್ಷ$್ಮಮ್ಮ ಶ್ರೀನಿವಾಸ್​, ಸೌಟೂರು ಟಿ.ವಿಶ್ವನಾಥರೆಡ್ಡಿ, ಗೋಪಸಂದ್ರ ಕೆಂಪಮ್ಮ ಸುಬ್ಬೆಗೌಡ, ಕಾಡೇನಹಳ್ಳಿ ಕೆ.ಎಸ್​. ಅಶೋಕ್​, ತಾಲೂಕು ಅಧ್ಯಕ್ಷ ಕಾಡೇನಹಳ್ಳಿ ಕೆ.ಎನ್​. ನಾಗರಾಜ್​, ವಕ್ತಾರ ಎಂ.ಎಸ್​. ಶ್ರೀನಿವಾಸ್​ ರೆಡ್ಡಿ, ನಗರಸಭೆ ಮಾಜಿ ಅಧ್ಯಕ್ಷ ಎಂ.ಎಸ್​. ಶ್ರೀನಿವಾಸ ರೆಡ್ಡಿ ಇದ್ದರು.

"ನಾನು ಸುಮಾರು ನಾಲ್ಕು ಬಾರಿ ಪಿಎಲ್​ಡಿ ಬ್ಯಾಂಕ್​ ನಿರ್ದೇಶಕರಾಗಿ ಆಯ್ಕೆಯಾಗಿದ್ದೇನೆ. ಇಷ್ಟಾದರೂ ಕಾಂಗ್ರೆಸ್​ ಮುಖಂಡರು ನನ್ನನ್ನು ಅಧ್ಯಕ್ಷ ಸ್ಥಾನಕ್ಕೆ ಲಾಯಕ್ಕು ಇಲ್ಲ ಎಂದು ಹೇಳಿರುವುದು ಖಂಡನೀಯ. ನನ್ನ ನಿರ್ದೇಶಕ ಸ್ಥಾನಕ್ಕೆ ರಾಜಿನಾಮೆ ನೀಡುತ್ತೇನೆ."

- ಶಂಕರನಾರಾಯಣ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net