ಪಿಎಲ್​ಡಿ ಬ್ಯಾಂಕ್​ ಚುನಾವಣೆ ಫಲಿತಾಂಶ ಪ್ರಕಟ

25 04 2025_BGR RURAL_PAGE_3
ದೊಡ್ಡಬಳ್ಳಾಪುರ ಪಿಎಲ್​ಡಿ ಬ್ಯಾಂಕ್​ ಚುನಾವಣೆಯಲ್ಲಿ ವಿಜೇತರಾದ ಸಿ.ಡಿ.ಅಶ್ವತ್ಥನಾರಾಯಣಗೌಡ ಅವರನ್ನು ಬೆಂಬಲಿಗರು ಸನ್ಮಾನಿಸಿದರು. ಡಿಪಿಎ ಅಧ್ಯಕ್ಷ ಚುಂಚೇಗೌಡ, ನಿರ್ದೇಶಕ ಅಪ್ಪಿ ವೆಂಕಟೇಶ್​, ಬೈರೇಗೌಡ, ಆರ್​.ವಿ ಗೌಡ, ತಳಗವಾರ ಟಿವಿ ಲ್ಮನಾರಾಯಣ್​ ಮತ್ತಿತ್ತರರು ಇದ್ದರು.
Published on

ದೊಡ್ಡಬಳ್ಳಾಪುರ: ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್​ನ 14 ನಿರ್ದೇಶಕ ಸ್ಥಾನಗಳ ಪೈಕಿ 6 ೇತ್ರಗಳಿಗೆ ಫೆ.16ರಂದು ನಡೆದಿದ್ದ ಮತದಾನದ ಫಲಿತಾಂಶ ಗುರುವಾರ ಪ್ರಕಟವಾಯಿತು.

ವಿಜೇತರಾದವರು: ಸಾಲಗಾರರ ಸಾಮಾನ್ಯ ಸ್ಥಾನದ ಮೆಳೇಕೋಟೆ ಕ್ಷೇತ್ರಕ್ಕೆ ಲ್ಮದೇವಿಪುರದ ಬಸವರಾಜು ಬಿ 17 ಮತಗಳು, ಸಿ.ಡಿ.ಅಗ್ರಹಾರ ಕ್ಷೇತ್ರಕ್ಕೆ ಸಿಡಿ.ಅಶ್ವತ್ಥ್​ ನಾರಾಯಣ ಗೌಡ 61 ಮತಗಳು, ಹಣಬೆ ಕ್ಷೇತ್ರಕ್ಕೆ ವಾಣಿಗರಹಳ್ಳಿ ವಿ.ವೇಣುಕುಮಾರ್​ 43 ಮತಗಳು, ಮಧುರೆ ಕ್ಷೇತ್ರಕ್ಕೆ ಸ್ಪರ್ಧಿಸಿದ್ದ ಕಸಾಟ್ಟ ಉಗ್ರಯ್ಯ 38 ಮತಗಳು, ಕೊಡಿಗೇಹಳ್ಳಿ ಕ್ಷೇತ್ರಕ್ಕೆ ಸ್ಪರ್ಧಿಸಿದ್ದ ತಳಗವಾರ ಟಿವಿ ಲ್ಮನಾರಾಯಣ್​ 17 ಮತಗಳು, ಮತ್ತು ಸಾಸಲು ಕ್ಷೇತ್ರದ ಸ್ಪರ್ಧಿಸಿದ್ದ ಚನ್ನವಿರನಹಳ್ಳಿಯ ಸಿವಿ ಲ್ಮಪತಯ್ಯ 27 ಮತಗಳನ್ನು ಪಡೆದು ವಿಜೇತರಾಗಿದ್ದಾರೆ.ಅವಿರೋಧವಾಗಿ ಆಯ್ಕೆಯಾದವರು: ಸಾಲ ಪಡೆಯದವರ ಕ್ಷೇತ್ರದಿಂದ ಎಲ್​.ಕೆ.ರಾಮಚಂದ್ರಬಾಬು, ರಾಜಟ್ಟ ಕ್ಷೇತ್ರ ಶಿವಣ್ಣ, ಕೊನಟ್ಟ ಕ್ಷೇತ್ರ ಮುನಿಕೃಷ್ಣ, ಹೊಸಹಳ್ಳಿ ಕ್ಷೇತ್ರ ನರಸಿಂಹಮೂರ್ತಿ, ತೂಬಗೆರೆ ಕ್ಷೇತ್ರ ನರಸಿಂಹಯ್ಯ, ಎಸ್​.ಎಸ್​. ಘಾಟಿ ಕ್ಷೇತ್ರ ಮುನಿಯನಾಯ್ಕ, ದೊಡ್ಡಬಳ್ಳಾಪುರ ನಗರ ಕ್ಷೇತ್ರ ರಾಜಲ್ಮ, ದೊಡ್ಡಬೆಳವಂಗಲ ಕ್ಷೇತ್ರದಿಂದ ಲಕ್ಷಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದರು. ಫೆ.16 ರಂದು ನಡೆದ ಚುನಾವಣೆಯ ಫಲಿತಾಂಶ ಪ್ರಕಟಣೆಗೆ ಹೈಕೋರ್ಟ್​ ಸೂಚನೆಯಂತೆ ಮುಂದಿನ ಆದೇಶದವರೆಗೂ ತಡೆ ಹಿಡಿಯಲಾಗಿತ್ತು. ಈಗ ಚುನಾವಣೆ ಫಲಿತಾಂಶವನ್ನು ಚುನಾವಣಾಧಿಕಾರಿ ನಾಗಮಣಿ ಪ್ರಕಟಿಸಿದರು.

ಮೂರು ಪಕ್ಷಗಳ ಸಮಬಲ : ಪಿಎಲ್​ಡಿ ಬ್ಯಾಂಕ್​ ಒಟ್ಟು 14 ಸ್ಥಾನಗಳ ಜತೆ ಒಂದು ಸರ್ಕಾರಿ ನಾಮಿನಿ ಸದಸ್ಯ ಸೇರಿ 15 ಸ್ಥಾನಗಳಲ್ಲಿ ಮೂರು ಪಕ್ಷಗಳು ಸಮಬಲ ಸಾಧಿಸಿವೆ. ಬಿಜೆಪಿ ಬೆಂಬಲಿತ 5, ಕಾಂಗ್ರೆಸ್​ ಬೆಂಬಲಿತ 5 ಮತ್ತು ಜೆಡಿಎಸ್​ ಬೆಂಬಲಿತ ಐವರು ಗೆಲುವು ಸಾಧಿಸುವ ಮೂಲಕ ಸಮಬಲ ಸಾಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net