

ಮಂಡ್ಯ: ಪಿಎಲ್‌ಡಿ ಬ್ಯಾಂಕ್‌ನಲ್ಲಿ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲ ಪಡೆದು ಸುಸ್ತಿದಾರರಾಗಿರುವವರಿಗೆ ರಾಜ್ಯ ಸರ್ಕಾರ ಬಡ್ಡಿ ಮನ್ನಾ ಸೌಲಭ್ಯ ಕಲ್ಪಿಸಿದೆ. ಆದ್ದರಿಂದ ಸುಸ್ತಿದಾರರು ಫೆ.29ರೊಳಗೆ ಅಸಲು ಪಾವತಿಸಿದರೆ ಬಡ್ಡಿ ಸಂಪೂರ್ಣ ಮನ್ನಾವಾಗಲಿದ್ದು, ಇದನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಬ್ಯಾಂಕ್ ಅಧ್ಯಕ್ಷ ಬೇಲೂರು ಸೋಮಶೇಖರ್ ತಿಳಿಸಿದರು.
ಜಿಲ್ಲೆಯ ಎಲ್ಲ ಪಿಎಲ್‌ಡಿ ಬ್ಯಾಂಕ್, ಎಂಡಿಸಿಸಿ ಹಾಗೂ ಅಪೆಕ್ಸ್ ಬ್ಯಾಂಕ್‌ನಿಂದ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲ 2800 ರೈತರಿಗೆ ಮಾತ್ರ ಈ ಸೌಲಭ್ಯ ದೊರೆಯಲಿದೆ. ಆದರೆ, ನಿರ್ದಿಷ್ಟ ಬ್ಯಾಂಕಿನ ಎಲ್ಲ ಸುಸ್ತಿದಾರರು ಅಸಲು ಪಾವತಿಸಿದರೆ ಮಾತ್ರ ಬಡ್ಡಿ ಮನ್ನಾ ಅನ್ವಯವಾಗಲಿದೆ. 10 ಜನರು ಅಸಲು ಬಾಕಿ ಉಳಿಸಿಕೊಂಡರೂ ಬಡ್ಡಿ ಮನ್ನಾ ಸೌಲಭ್ಯ ದೊರೆಯುವುದಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಪಿಎಲ್‌ಡಿ ಬ್ಯಾಂಕ್‌ನಲ್ಲಿ ಒಟ್ಟು 392 ಸುಸ್ತಿದಾರರಿದ್ದಾರೆ. ಅವರಿಂದ ಅಸಲು ಮತ್ತು ಬಡ್ಡಿ ಮೊತ್ತ ಸೇರಿ ಒಟ್ಟು 8.42 ಕೋಟಿ ರೂ ವಸೂಲಾಗಬೇಕಿದೆ. ಆದರೆ, ಇದರಲ್ಲಿ 4.20 ಕೋಟಿ ರೂ ಅಸಲು ಮೊತ್ತವಾಗಿದ್ದು, 4.22 ಕೋಟಿ ರೂ ಬಡ್ಡಿಯಾಗಿದೆ. ಆದ್ದರಿಂದ 4.20 ಕೋಟಿ ಅಸಲು ಪಾವತಿಸಿದರೆ ಬಡ್ಡಿ ಮನ್ನಾ ಆಗಲಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಸುಸ್ತಿದಾರರು ಅಸಲು ಸಾಲ ಮೊತ್ತ ಪಾವತಿಸುವ ಮೂಲಕ ಬಡ್ಡಿ ಮನ್ನಾ ಸೌಲಭ್ಯ ಪಡೆದುಕೊಳ್ಳಬೇಕು. ಅಸಲಿಗಿಂತ ಬಡ್ಡಿ ಮೊತ್ತ ಅಧಿಕವಾಗಿದ್ದರೂ ಕೂಡ ಬಡ್ಡಿ ಮನ್ನಾ ಆಗಲಿದೆ ಎಂದರು.
ರಾಜ್ಯದ ಎಲ್ಲ 137 ಪಿಎಲ್‌ಡಿ ಬ್ಯಾಂಕಿನ ಅಧ್ಯಕ್ಷರು ಕಳೆದ ಸೆಪ್ಟಂಬರ್‌ನಲ್ಲಿ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ, ಕೆಲ ಪಿಕಾರ್ಡ್ ಬ್ಯಾಂಕ್‌ಗಳು ಸುಸ್ತಿಯಲ್ಲಿದ್ದು, ಇನ್ನುಳಿದಂತೆ 130ಕ್ಕೂ ಹೆಚ್ಚು ಚಿಂತಾಜನಕವಾಗಿವೆ. ರೈತರು ಹಳೇ ಸಾಲವನ್ನು ತೆಗೆದುಕೊಂಡು ತುಂಬ ವರ್ಷಗಳಿಂದಲೂ ಅಸಲಿಗಿಂತಲೂ ಬಡ್ಡಿ ಹಣವೇ ಹೆಚ್ಚಾಗಿದೆ. ಸಾಲ ಮನ್ನಾ ಮಾಡಲು ಸಾಧ್ಯವಾಗದಿದ್ದರೂ, ಬಡ್ಡಿಯನ್ನಾದರೂ ಮನ್ನಾ ಮಾಡಬೇಡಬೇಕೆಂದು ಮನವಿ ಮಾಡಿದ್ದೆವು. ಅದಕ್ಕೆ ರಾಜ್ಯ ಸರ್ಕಾರ ಸ್ಪಂದಿಸಿದೆ ಎಂದು ಕೃತಜ್ಞತೆ ಸಲ್ಲಿಸಿದರು.
ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ಅರವಿಂದ್, ನಿರ್ದೇಶಕರಾದ ಬಿಳಿದೇಗಲು ಬೋರೇಗೌಡ, ಹೊಸಹಳ್ಳಿ ಶಿವಲಿಂಗೇಗೌಡ, ತಗ್ಗಹಳ್ಳಿ ಶಿವಲಿಂಗೇಗೌಡ, ಸುನಂದಮ್ಮ, ನಂಜುಂಡ ಶಿವಾರ, ಯೋಗೇಶ್ ಹಾಜರಿದ್ದರು.