ಮೆಡಿಕಲ್ ಸೀಟ್ ಗಾಗಿ ಕೋಟ್ಯಂತರ ರೂ.ವಂಚನೆ; ವ್ಯಕ್ತಿ ಬಂಧನ

IMG-20240715-WA0010.jpg
Published on

ಬೆಳಗಾವಿ: ದೇಶದಲ್ಲಿ‌ನೀಟ್ ಅಕ್ರಮ ತನಿಖೆ ನಡೆಯುತ್ತಿರುವ ಬೆನ್ನಲ್ಲೆ ಮೆಡಿಕಲ್ ಸೀಟ್ ಕೊಡಿಸುವುದಾಗಿ ಜನರಿಗೆ ಕೋಟ್ಯಂತರ ರೂ.‌ ವಂಚಿಸಿದ ವ್ಯಕ್ತಿಯೊಬ್ಬನನ್ನು ಬೆಳಗಾವಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ದೇಶದಲ್ಲೇ ಸದ್ದು ಮಾಡಿದ ನೀಟ್ ಪರೀಕ್ಷೆ ಅಕ್ರಮ ಒಂದು ಕಡೆಯಾದರೆ, ಇದನ್ನೇ ಬಂಡವಾಳ ಮಾಡಿಕೊಂಡ ಬಂಧಿತ ವ್ಯಕ್ತಿ ನೀಟ್ ಪರೀಕ್ಷೆಯಲ್ಲಿ ಪಾಸ್ ಮಾಡಿಸಿ, ಎಂಬಿಬಿಎಸ್ ಸೀಟ್ ಕೊಡಿಸುವದಾಗಿ ನಂಬಿಸಿ ಸುಮಾರು 10 ಕ್ಕೂ ಹೆಚ್ಚು ಜನರಿಗೆ ಮೋಸ ಮಾಡಿದ್ದಾನೆ. ಅವರಿಂದ ಸುಮಾರು 1,30,41,884 ರೂ. ಎಗರಿಸಿ ಪರಾರಿಯಾಗಿದ್ದಾನೆ. ಇದರ ಜಾಡು ಹೀಡಿದ ಪೊಲೀಸರ ತಂಡ ಆರೋಪಿಯನ್ನು ಮಹಾರಾಷ್ಟ್ರದ ಮುಂಬೈನಲ್ಲಿ ಪತ್ತೆ ಹಚ್ಚಿ ಅರೆಸ್ಟ್ ಮಾಡಿದ್ದಾರೆ.

ಕಂತೆ ಕಂತೆ ನೋಟುಗಳು, ಲಾಪ್ ಟಾಪ್, ಮೋಬೈಲ್ ಫೋನ್ ಹಾಗೂ ಕಂಪ್ಯೂಟರ್ ಗಳನ್ನು ಇಟ್ಟಿಕೊಂಡ ತೇಲಂಗಾಣ ಮೂಲದ ಅರಗೊಂಡ ಅರವಿಂದ ಅಲಿಯಾಸ್ ಅರುಣಕುಮಾರ (43) ಖಂದೀಮನನ್ನು ಬಂಧಿಸಿರುವ ಪೊಲೀಸರು ಅವನಿಂದ 12 ಲಕ್ಷ ಹಣ ಹಾಗೂ 12,66,900 ಬೆಲೆಯ ವಸ್ತುಗಳನ್ನು ಸೀಜ್ ಮಾಡಲಾಗಿದೆ ಎಂದು ಡಿಸಿಪಿ ರೋಹನ್ ಜಗದೀಶ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net