ಪರಪ್ಪನ ಅಗ್ರಹಾರದಿಂದ ಹಿಂಡಲಗಾ ಜೈಲಿಗೆ ಶಿಫ್ಟ್

IMG-20240829-WA0020.jpg
Published on

ಬೆಳಗಾವಿ:ಚಿತ್ರದುರ್ಗದ ರೇಣುಕಾಸ್ವಾಮಿ‌ ಕೊಲೆ ಪ್ರಕರಣ ಎ-14 ಆರೋಪಿ ಪ್ರದೋಶ್ ನನ್ನು ಬೆಳಗಾವಿಯ ಹಿಂಡಲಗಾ ಜೈಲಿಗೆ ಗುರುವಾರ ಮಧ್ಯಾಹ್ನ 3.45ಕ್ಕೆ ಶಿಫ್ಟ್ ಮಾಡಲಾಯಿತು.

ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ಬೆಳಗಾವಿ ಹಿಂಡಲಗಾ ಜೈಲಿಗೆ ಸಿಬ್ಬಂದಿಗಳು ಆರೋಪಿಯನ್ನು ಪೊಲೀಸ್ ವಾಹನದಲ್ಲಿ ಕರೆತಂದರು.

ರೇಣುಕಾಸ್ವಾಮಿ ಕೊಲೆ ಪ್ರಕರಣದ 14ನೇ ಆರೋಪಿ ಆಗಿರುವ ಪ್ರದೋಶ್ ಬ್ಲ್ಯಾಂಕೆಟ್ ಹಾಗೂ ಬ್ಯಾಗ್ ಸಮೇತ ಜೈಲಿಗೆ ಆಗಮಿಸಿದ. ಬ್ಯಾಗ್ ಅನ್ನು ಭದ್ರತಾ ಪಡೆಯ ಸಿಬ್ಬಂದಿ ಸಂಪೂರ್ಣ ತಪಾಸಣೆ ನಡೆಸಿದರು.

ಬ್ಲ್ಯಾಂಕೆಟ್ ಒಳಗೆ ತೆಗೆದುಕೊಂಡು ಹೋಗಲು ಪ್ರದೋಶ್ ಗೆ ಅವಕಾಶ ನೀಡಲಿಲ್ಲ. ಬ್ಯಾಗ್ ನಲ್ಲಿದ್ದ ಸಿರಪ್ ವೈದ್ಯರ ಸಲಹೆ ಮೇರೆಗೆ ಕೊಡುತ್ತೇವೆ ಎಂದು ಸಿಬ್ಬಂದಿ ಹೇಳಿದ್ದಾರೆ. ಅಲ್ಲಿಯವರೆಗೆ ಸಿರಪ್ ನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದರು. ಇನ್ನು ಎರಡು ಬ್ಯಾಗ್ ನಲ್ಲಿ ಹಲವು ವಸ್ತುಗಳ ಸಹ ಪತ್ತೆಯಾಗಿವೆ. ತಪಾಸಣೆ ಮುಗಿದ ಬಳಿಕ ಆರೋಪಿಯನ್ನು ಸಿಬ್ಬಂದಿ ಜೈಲಿನೊಳಗೆ ಬಿಟ್ಟರು. ಆರೋಪಿ ಪ್ರದೋಷ್ ಗೆ 2894 ಖೈದಿ ನಂಬರ್ ನೀಡಲಾಗಿದೆ. ಹಿಂಡಲಗಾ ಜೈಲಿ‌ ಅತೀ ಭದ್ರತಾ‌ ವಿಭಾಗದ ಸೆಲ್ ನಲ್ಲಿ ಪ್ರದೋಶ್ ಗೆ ಇರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net