

ಬೆಳಗಾವಿ: ನಗರದ ವಿವಿಧ ಕಡೆಗಳಲ್ಲಿ ಸರಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯನ್ನು ಬಂಧಿಸಿ ಆತನಿಂದ ₹7.75 ಲಕ್ಷ ಮೌಲ್ಯದ ಸ್ವತ್ತು ವಶಪಡಿಸಿಕೊಂಡಿದ್ದಾರೆ.
ಬಸ್ತವಾಡರೋಡ ದಾಮಣೆಯ ಪ್ರಜ್ವಲ ಜಯಪಾಲ ಖಾನಜಿ ಎಂಬಾತನನ್ನು ಬಂಧಿಸಲಾಗಿದೆ. ನಗರದ ವಿವಿಧ ಕಡೆಗಳಲ್ಲಿ ನಡೆದ ಸರಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಶಹಪೂರ ಠಾಣೆಯ ಪೊಲೀಸರು ಈತನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ಸಮಯದಲ್ಲಿ
ನಗರದ ಶಹಾಪೂರ. ತಿಲಕವಾಡಿ, ಉದ್ಯಮಬಾಗ ಪ್ರದೇಶಗಳಲ್ಲಿ ಸರಗಳ್ಳತನ ಮಾಡಿದ ಬಗ್ಗೆ ಹಾಗೂ7.50ಲಕ್ಷ ಮೌಲ್ಯದ ಕಳ್ಳತನದ 103.430ಗ್ರಾಂ ಬಂಗಾರದ ಆಭರಣಗಳನ್ನು ಮಣಪ್ಪುರಂ ಪೈನಾನ್ಸ ಶಾಖೆಯಲ್ಲಿ ಅಡವಿಟ್ಟಿರುವ ಕುರಿತು ತಿಳಿಸಿದ್ದಾನೆ. ಈ ಹಿನ್ನೆಲೆ ಅಡವಿಟ್ಟ ಬಂಗಾರದ ಆಭರಣ ಹಾಗೂ ಕೃತ್ಯಕ್ಕೆ ಬಳಿಸಿದ 25 ಸಾವಿರ ಮೌಲ್ಯದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಈ ಕಾರ್ಯಾಚರಣೆಯಲ್ಲಿಶಹಾಪೂರ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ ಎಸ್ ಎಸ್ ಸಿಮಾನಿ, ಪಿ.ಎಸ್.ಐ ಮಣಿಕಂಠ ಪೂಜಾರಿ, ಶಎಸ್ ಎನ್ ಬಸ್ವಾ, ಎ,ಎಸ್,ಐ ಶ್ ಆರ್ ಆಯ್ ಸನದಿ, ಸಿಬ್ಬಂದಿ ಸಂತೋಷ ಪಾಟೀಲ, ಎಸ್ ಎಮ್ ಗುಡದೈಗೋಳ, ನಾಗರಾಜ ಓಸಪ್ಪಗೋಳ, ಸ ಸುರೇಶ ಎಮ್ ಕಾಂಬಳೆ, ಆನಂದ ಖೋತ, ಹಣಮಂತ ವಿಭೂತಿ. ಅಮರನಾಥ ದಂಡಿನ, ಗಂಗವ್ವ ಈ ಪಾರ್ವತಿ ಭಾಗವಹಿಸಿದ್ದರು.