

ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಕೃಷಿಕರ ಜೀವನ, ಬದುಕಿನ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಹಡಿಲುಬಿದ್ದಿರುವ 16 ಗದ್ದೆಗಳಲ್ಲಿ ನಾಟಿ ಕಾರ್ಯ ನಡೆಸಲಾಗುತ್ತಿದೆ ಎಂದು ವಿದ್ಯಾರತ್ನ ಆಂಗ್ಲಮಾಧ್ಯಮ ಶಾಲಾ ಆಡಳಿತ ನಿರ್ದೇಶಕ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಹೇಳಿದರು.
ದೇರಳಕಟ್ಟೆ ವಿದ್ಯಾರತ್ನ ಆಂಗ್ಲಮಾಧ್ಯಮ ಶಾಲೆಯ ಆಶ್ರಯದಲ್ಲಿ ಹರೇಕಳ ಗ್ರಾಮದ ಮಂಜಲಗುತ್ತು ಮನೆಯ ಮುಂಭಾಗದಲ್ಲಿರುವ ಹಡಿಲುಬಿದ್ದ ಮಡ್ಡೆಲ್‌ಮಾರ್ ಗದ್ದೆ ಸಹಿತ 16 ಗದ್ದೆಗಳಲ್ಲಿ ವಿದ್ಯಾರ್ಥಿಗಳಿಂದ ಶನಿವಾರ ಸಾಂಕೇತಿಕ ಭತ್ತನಾಟಿ ಮತ್ತು ಕೆಸರುಗದ್ದೆಯಲ್ಲಿ ಆಟೋಟ ಕಾರ್ಯಕ್ರಮ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹರೇಕಳ ಶ್ರೀ ಅರ್ಧನಾರೀಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ದೆಬ್ಬೇಲಿಗುತ್ತು ಮೋಹನ್‌ದಾಸ್ ರೈ ಕಾರ್ಯಕ್ರಮ ಉದ್ಘಾಟಿಸಿದರು. ಉಳ್ಳಾಲ ವಲಯ ಬಂಟರ ಸಂಘದ ಅಧ್ಯಕ್ಷ ರವೀಂದ್ರ ರೈ ಕಲ್ಲಿಮಾರ್, ದಿ ಮೈಸೂರ್ ಇಲೆಕ್ಟ್ರಿಕಲ್ಸ್ ಇಂಡಸ್ಟ್ರೀಸ್ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಹಿಂದುಳಿದ ಆಯೋಗದ ಮಾಜಿ ಸದಸ್ಯ ಕೆ.ಟಿ.ಸುವರ್ಣ, ರೈಲ್ವೆ ಸಲಹಾ ಮಂಡಳಿ ಮಾಜಿ ಸದಸ್ಯ ಚಂದ್ರಹಾಸ್ ಅಡ್ಯಂತಾಯ, ಬಿಜೆಪಿ ಮಂಡಲ ಅಧ್ಯಕ್ಷ ಜಗದೀಶ್ ಆಳ್ವ ಕುವೆತ್ತಬೈಲ್, ಸುಧಾಕರ್ ಗಟ್ಟಿ ಬೈತಾರ್, ಮಂಡಲ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಮುರಳೀಧರ್ ಕೊಣಾಜೆ, ಬಿಜೆಪಿ ಮುನ್ನೂರು ಮಹಾಶಕ್ತಿ ಕೇಂದ್ರ ಅಧ್ಯಕ್ಷ ಸತೀಶ್ ಪೂಜಾರಿ, ಪ್ರವೀಣ್ ಕೊಂಡಾಣ ಮಿತ್ರನಗರ, ಗದ್ದೆ ಮಾಲೀಕರಾದ ರತ್ನ ತಿಮ್ಮಪ್ಪ ಮಡಿವಾಳ ಹಾಗೂ ಬಾಬು ಬಂಗೇರ, ಸ್ಥಳೀಯ ಮುಖಂಡರಾದ ಸುಧಾಕರ ಆಚಾರ್ಯ ರಾಜಗುಡ್ಡೆ, ಕಲ್ಲಾಯಿ ದುರ್ಗಾಪ್ರಸಾದ್ ರೈ, ಪಡ್ಡಾಯಿಬೆಟ್ಟು ಜಯರಾಮ್, ಭಾಸ್ಕರ್ ರೈ ಸಂಪಿಗೆದಡಿ, ಆನಂದ್ ಶೆಟ್ಟಿ ತೊಕ್ಕೊಟ್ಟು, ಗೋಪಾಲಕೃಷ್ಣ ಮೇಲಾಂಟ ಬೊಳ್ಯಗುತ್ತು, ಬಬಿತಾ ಮಹಾಬಲ ಹೆಗ್ಡೆ, ವರದರಾಜ್ ಮಾಣೈ, ರಾಧಾಕೃಷ್ಣ ರೈ ಮುಖ್ಯ ಅತಿಥಿಗಳಾಗಿದ್ದರು.
ಶಾಲಾ ವಿದ್ಯಾರ್ಥಿ ನಾಯಕ ಭವಿತ್ ವಿ.ಸುವರ್ಣ, ಮುಖ್ಯಶಿಕ್ಷಕಿ ನಯೀಮ ಹಮೀದ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಸೌಮ್ಯ ಆರ್.ಶೆಟ್ಟಿ ವಂದಿಸಿದರು. ಭಗವಾನ್ ದಾಸ್ ತೊಕ್ಕೊಟ್ಟು ಕಾರ್ಯಕ್ರಮ ನಿರೂಪಿಸಿದರು.