ಆಟದ ಮೈದಾನಗಳು ದೇವಾಲಯದಂತೆ

22 nrp 2
ಎನ್.ಆರ್.ಪುರದಲ್ಲಿ ನಡೆದ ತಾಲೂಕು ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟ ಉದ್ಘಾಟನಾ ಸಮಾರಂಭದಲ್ಲಿ ದಾನಿಗಳನ್ನು ಸನ್ಮಾನಿಸಲಾಯಿತು.
Published on

ಎನ್.ಆರ್.ಪುರ: ಕ್ರೀಡೆ ಎಂದರೆ ತಪಸ್ಸು, ಯೋಗ, ಉತ್ಸವ ಎಂದು ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಎಸ್.ಕೆ.ಮಕ್ಬೂಲ್ ಅಹಮ್ಮದ್ ಹೇಳಿದರು.
ಶುಕ್ರವಾರ ಮುತ್ತಿನಕೊಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲೆ ಆವರಣದಲ್ಲಿ ತಾಲೂಕು ಮಟ್ಟದ ಪ್ರೌಢ ಶಾಲೆಗಳ ಕ್ರೀಡಾಕೂಟ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಪ್ರತಿ ಶಾಲೆಯಲ್ಲೂ ಇರುವ ಆಟದ ಮೈದಾನಗಳು ವಿದ್ಯಾರ್ಥಿಗಳಿಗೆ ದೇವಾಲಯದಂತೆ. ಪ್ರತಿ ಶಾಲೆಯಲ್ಲೂ ಪಾಠದ ಜತೆಗೆ ದೈಹಿಕ ಶಿಕ್ಷಣ ಕಲಿಸಲಾಗುತ್ತದೆ. ಈಗಾಗಲೇ ವಲಯ ಮಟ್ಟದ ಕ್ರೀಡಾಕೂಟ ಮುಗಿಸಿದ್ದು ಈಗ ತಾಲೂಕು ಮಟ್ಟದ ಕ್ರೀಡಾಕೂಟ ನಡೆಯುತ್ತಿದೆ ಎಂದರು.
ಮುತ್ತಿನಕೊಪ್ಪ ಗ್ರಾಪಂ ಸದಸ್ಯ ಮಹಮ್ಮದ್ ಯಾಜ್ ಮಾತನಾಡಿ, ಕ್ರೀಡೆಯಲ್ಲಿ ಸೋಲು, ಗೆಲುವು ಮುಖ್ಯವಲ್ಲ. ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ. ಮಕ್ಕಳು ಎಲ್ಲಾ ಕ್ರೀಡೆಯಲ್ಲೂ ಭಾಗವಹಿಸಬೇಕು ಎಂದು ಕರೆ ನೀಡಿದರು.
ದಾನಿಗಳಾದ ಕೆ.ಆರ್.ನಾಗೇಂದ್ರ, ಕೆ.ಆರ್.ಮಂಜುನಾಥ್, ಪಿ.ವರ್ಗೀಸ್, ವಿ.ನೀಲೇಶ್, ಕೆ.ಎಸ್.ಶ್ರೀನಿವಾಸ್, ನಿತಿನ್.ಎನ್.ಶೆಟ್ಟಿ, ಗಂಗಾಧರ್, ಚಂದ್ರಪ್ಪ ಅವರನ್ನು ಸನ್ಮಾನಿಸಲಾಯಿತು. ಕ್ರೀಡಾಕೂಟದಲ್ಲಿ 23 ಪ್ರೌಢ ಶಾಲೆಗಳ ಮಕ್ಕಳು ಭಾಗವಹಿಸಿದ್ದರು. ಥ್ರೋ ಬಾಲ್ , ಖೋ ಖೋ, ಕಬಡ್ಡಿ, ಬಾಲ್‌ಬ್ಯಾಡ್ಮಿಟನ್ ಪಂದ್ಯಾವಳಿ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net