ಕಸ್ತೂರ್ಬಾ ಮೆಡಿಕಲ್ ಕಾಲೇಜಿನಲ್ಲಿ ಆಟಿದ ನೆಂಪು

KMC
ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಬಾವುಟಗುಡ್ಡೆ ಆವರಣದ ಶಿಕ್ಷಕೇತರ ಸಿಬ್ಬಂದಿ ವತಿಯಿಂದ ಆಟಿದ ನೆಂಪು ಕಾರ್ಯಕ್ರಮ ನಡೆಯಿತು. ಸಹಾಯಕ ಕುಲಪತಿ ಡಾ.ದಿಲೀಪ್ ಜಿ.ನಾಯಕ್, ಕೆಎಂಸಿ ಡೀನ್ ಡಾ.ಬಿ.ಉಣ್ಣಿಕೃಷ್ಣನ್, ಕೆಎಂಸಿ ಆಡಳಿತ ಕಚೇರಿಯ ಮ್ಯಾನೇಜರ್ ಧರ್ಮೇಂದ್ರ ಎಂ.ಪಿ. ಮೊದಲಾದವರು ಉಪಸ್ಥಿತರಿದ್ದರು.
Published on

ಮಂಗಳೂರು: ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಶಿಕ್ಷಕೇತರ ಸಿಬ್ಬಂದಿ ವತಿಯಿಂದ ಇತ್ತೀಚೆಗೆ ಆಟಿದ ನೆಂಪು ಕಾರ್ಯಕ್ರಮ ಜರುಗಿತು.

ಮಾಹೆ ಮಂಗಳೂರು ಕ್ಯಾಂಪಸ್ ಸಹಾಯಕ ಕುಲಪತಿ ಡಾ.ದಿಲೀಪ್ ಜಿ.ನಾಯಕ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಮಧ್ಯೆ ಸೌಹಾರ್ದಯುತ ಸಂಬಂಧ ಬೆಳೆಸಲು ಇಂಥ ಕಾರ್ಯಕ್ರಮಗಳು ಪೂರಕ ಎಂದು ಹೇಳಿದರು.

ಕೆಎಂಸಿ ಡೀನ್ ಡಾ.ಬಿ.ಉಣ್ಣಿಕೃಷ್ಣನ್ ಮುಖ್ಯ ಅತಿಥಿಯಾಗಿದ್ದರು. ಸಂಘಟಕ ಕದ್ರಿ ನವನೀತ ಶೆಟ್ಟಿ ವಿಶೇಷ ಉಪನ್ಯಾಸ ನೀಡಿದರು. ದಂತ ವೈದ್ಯಕೀಯ ಕಾಲೇಜಿನ ಡೀನ್ ಡಾ.ಅಶಿತಾ ಉಪ್ಪೂರ್, ಕೆಎಂಸಿ ಅಸೋಸಿಯೇಟ್ ಡೀನ್‌ಗಳಾದ ಡಾ.ಸುರೇಶ್ ಕುಮಾರ್ ಶೆಟ್ಟಿ, ಡಾ.ಶ್ರೀಕಲಾ ಬಾಳಿಗ ಮತ್ತಿತರರು ಉಪಸ್ಥಿತರಿದ್ದರು. ಕೆಎಂಸಿ ಆಡಳಿತ ಕಚೇರಿ ಮ್ಯಾನೇಜರ್ ಧರ್ಮೇಂದ್ರ ಎಂ.ಪಿ. ಸ್ವಾಗತಿಸಿದರು. ಕಾರ್ಯನಿರ್ವಹಣಾಧಿಕಾರಿ ಭಾನುಕಲಾ ಉದಯ್ ಪರಿಚಯಿಸಿದರು. ಸುಕನ್ಯಾ ಕುಮಾರಿ ವಂದಿಸಿದರು. ಎಚ್‌ಆರ್ ವಿಭಾಗದ ಅಸಿಸ್ಟೆಂಟ್ ಮ್ಯಾನೇಜರ್ ಸತೀಶ್ ಶೆಟ್ಟಿ ಕೊಡಿಯಾಲ್‌ಬೈಲ್ ಕಾರ್ಯಕ್ರಮ ನಿರೂಪಿಸಿದರು. ಸುಮಾರು 60 ಬಗೆಯ ತುಳುನಾಡಿನ ಸಾಂಪ್ರದಾಯಿಕ ಖಾದ್ಯಗಳನ್ನು ಉಣಬಡಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net