ಆಟದಲ್ಲಿ ಭಾಗವಹಿಸುವುದು ಮುಖ್ಯ

DEC27-HRP-3
ಹರಪನಹಳ್ಳಿ ತಾಲೂಕಿನ ಹಲುವಾಗಲು ಗ್ರಾಮದಲ್ಲಿ ಸೋಮವಾರ ನಡೆದ ಕ್ರಿಕೇಟ್ ಟ್ರೂರ್ನಿಮೆಂಟ್‌ನಲ್ಲಿ ಗೆದ್ದ ತಂಡಕ್ಕೆ ಕಾಂಗ್ರೆಸ್ ಮುಖಂಡರಾದ ಹೆಚ್.ಟಿ.ವನಜಾಕ್ಷಿರವರು ಬಹುಮಾನ ವಿತರಿಸಿದರು. ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಮಂಜಪ್ಪ, ರಾಹುಲ್, ಭೋವಿ ವೆಂಕಟೇಶ್, ರಾಮಣ್ಣ, ಕೆ.ಗಂಗಪ್ಪ, ಚಿರಸ್ತಹಳ್ಳಿ ಕೆ.ಹನುಮಂತಪ್ಪ ಇದ್ದರು.
Published on

ಹರಪನಹಳ್ಳಿ: ಕ್ರೀಡೆಯಲ್ಲಿ ಸೋಲು, ಗೆಲುವು ಲೆಕ್ಕಿಸದೆ ಭಾಗವಹಿಸುವುದು ಕಲಿಯಿರಿ ಎಂದು ತಾಲೂಕು ವಾಲ್ಮೀಕಿ ಸಮಾಜದ ಅಧ್ಯಕ್ಷೆ ಎಚ್.ಟಿ.ವನಜಾಕ್ಷಿ ಶಿವಯೋಗಿ ಹೇಳಿದರು.

ತಾಲೂಕಿನ ಹಲುವಾಗಲುನಲ್ಲಿ ನಿಜಲಿಂಗಪ್ಪಾಜಿ ಸೇವಾ ಸಮಿತಿ ಆಯೋಜಿಸಿದ್ದ ಹೆಚ್‌ಪಿಎಲ್ ಸೀಜನ್ ಒನ್ ಕ್ರಿಕೆಟ್ ಟ್ರೂನ್‌ಮೆಂಟ್‌ನಲ್ಲಿ ಗೆದ್ದವರಿಗೆ ಟ್ರೋಫಿ ನೀಡಿ ಮಾತನಾಡಿದರು.

ಕ್ರೀಡೆಯಿಂದ ಮಾನಸಿಕ, ದೈಹಿಕವಾಗಿ ಸದೃಢರಾಗಲು ಸಾಧ್ಯ. ಯುವಜನತೆ ಸಂಘಟಿತರಾಗಿ ನಡೆಸುವ ಕ್ರೀಡೆ, ಮನೋರಂಜನಾ ಕಾರ್ಯಕ್ರಮಗಳಿಗೆ ಸಹಕಾರ ನೀಡುವುದಾಗಿ ಹೇಳಿದರು.

ಜೈ ಶ್ರೀರಾಮ, ಜೈಭಗವಾನ ತಂಡದವರಿಗೆ ಬಹುಮಾನ ವಿತರಿಸಲಾಯಿತು. ಗ್ರಾಪಂ ಸದಸ್ಯರಾದ ಮಂಜಪ್ಪ, ರಾಹುಲ್, ಭೋವಿ ವೆಂಕಟೇಶ್, ರಾಮಣ್ಣ, ಕೆ.ಗಂಗಪ್ಪ, ಚಿರಸ್ತಹಳ್ಳಿ ಕೆ.ಹನುಮಂತಪ್ಪ ತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net