

ಬೆಟಗೇರಿ: ಶಾಲಾ&ಕಾಲೇಜು ವಿದ್ಯಾರ್ಥಿಗಳು ಪಠ್ಯ ಅಭ್ಯಾಸದ ಜತೆಗೆ ಕ್ರೀಡೆಯಲ್ಲಿಯೂ ಭಾಗವಹಿಸಿ ಉತ್ತಮ ಸಾಧನೆ ಮಾಡಬೇಕು ಎಂದು ಮುಖ್ಯಶಿಕ್ಷಕ ರಮೇಶ ಅಳಗುಂಡಿ ಹೇಳಿದರು.
ಗ್ರಾಮದ ವಿವಿಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಶಾಲಾ ಮಕ್ಕಳಲ್ಲಿ ಕ್ರೀಡಾಸ್ಫೂರ್ತಿ ತುಂಬಲು ಕ್ರೀಡಾ ದಿನ ಹಮ್ಮಿಕೊಳ್ಳಲಾಗುತ್ತದೆ ಎಂದರು.
ಶಾಲೆಯ ದೆಹಿಕ ಶಿಕ್ಷಣ ಶಿಕ ಈಶ್ವರ ಮುನವಳ್ಳಿ ಮಾತನಾಡಿ, ಹಾಕಿ ರಾಷ್ಟ್ರೀಯ ಕ್ರೀಡೆಯಾಗಿದ್ದು, ಮೇಜರ್ ಧ್ಯಾನ್ಚಂದ್ ದೇಶದ ಹೆಮ್ಮೆಯ ಹಾಕಿಪಟುವಾಗಿದ್ದಾರೆ. ಮಕ್ಕಳು ಅವರ ಚರಿತ್ರೆ ಅರಿಯಬೇಕು ಎಂದರು. ಈರಣ್ಣ ಪಟಗುಂದಿ, ರಾಕೇಶ ನಡೋಣೆ, ರಮೇಶ ಬುದ್ನಿ, ವೆ.ಎಂ.ವಗ್ಗರ, ಗಣಪತಿ ಭಾಗೋಜಿ, ಶುಭಾ ಬಿ., ಭಾಗ್ಯಶ್ರೀ ನಾಯಕ, ಸೌಮ್ಯಶ್ರೀ ಗಂಗಾ, ಮಲ್ಹಾರಿ ಪೋಳ, ಸಹ ಶಿಕರು, ಅತಿಥಿ ಶಿಕರು ಇತರರಿದ್ದರು.