

ಶನಿವಾರಸಂತೆ: ನಿಡ್ತ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಹಾರೆಹೊಸೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಸಮಾಜ ಸೇವಕಿ ನಿತಾರ ಅರುಣ್‌ಕುಮಾರ್ ಊಟದ ತಟ್ಟೆ, ಲೋಟವನ್ನು ಉಚಿತವಾಗಿ ವಿತರಿಸಿದರು.
ಇದೇ ವೇಳೆ ಗ್ರಾಪಂ ಅಧ್ಯಕ್ಷರು, ಸದಸ್ಯರು, ಪಿಡಿಒ ಜತೆ ಸೇರಿ ಮಧ್ಯಾಹ್ನದ ಬಿಸಿಯೂಟ ಮತ್ತು ಶಾಲೆಯ ಸ್ಥಿತಿಗತಿಗಳನ್ನು ಪರಿಶೀಲನೆ ನಡೆಸಿದರು.
ಗ್ರಾಪಂ ಅಧ್ಯಕ್ಷ ಟಿ.ಕೆ.ಅಶೋಕ್, ನಿಡ್ತ ಪಿಡಿಒ ಮಾನಸಾ, ಗ್ರಾಪಂ ಸದಸ್ಯರಾದ ಕಾರ್ತಿಕ್, ರೋಹಿಣಿ ಕುಮಾರ್, ವೆಂಕಟೇಶ್, ಪುಟ್ಟಸ್ವಾಮಿ, ಶಾಲಾ ಮುಖ್ಯ ಶಿಕ್ಷಕಿ ಕವಿತಾ, ಶಿಕ್ಷಕ ಪಿ.ಎನ್.ಯಶ್ವಂತ್ ಮುಂತಾದವರು ಹಾಜರಿದ್ದರು.