ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ

15-SanduruP4
ಸಂಡೂರು ತಾಲೂಕು ತೋರಣಗಲ್ ಹೋಬಳಿ ಕುರೇಕುಪ್ಪ ಪುರಸಭೆಯಲ್ಲಿ ಸ್ವಾತಂತ್ರ್ಯದಿನಾಚರಣೆ ಅಂಗವಾಗಿ ಸಾಮಾಜಿಕ ಜಾಲತಾಣ ಅನಾವರಣ, ಪ್ಲಾಸ್ಟಿಕ್ ನಿಷೇಧ ಹಾಗೂ ಸೋಲಾರ್ ಸಿಸ್ಟಂ ಯೂನಿಟ್ ಅಳವಡಿಕೆ ಕಾರ್ಯಕ್ರಮಗಳ ಬಗ್ಗೆ ಪ್ರಚಾರ ಮಾಡಲಾಯಿತು. ಪುರಸಭೆ ಅಧ್ಯಕ್ಷ ಕೆ.ಕಲ್ಗುಡೆಪ್ಪ, ಮುಖ್ಯಾಧಿಕಾರಿ ಸತೀಶ್ ಗುಡ್ಡೆ, ಪುರಸಭೆ ಸದಸ್ಯ ಎನ್.ಸೋಮಪ್ಪ, ಕುರೇಕುಪ್ಪ ಪುರಸಭೆ ಅಧ್ಯಕ್ಷ ಕೆ.ಕಲ್ಗುಡೆಪ್ಪ, ಉಪಾಧ್ಯಕ್ಷೆ ಜ್ಯೋತಿ ನಾರಾಯಣ, ಸದಸ್ಯರಾದ ಎಸ್.ಕೆ.ಮೆಹ ಬೂಬ್ ಬಾಷ, ಕಾರ್ಗಿಲ್ ಬಸವನಗೌಡ. ಲಕ್ಷ್ಮೀ ಹೊಸಗೇರಪ್ಪ, ನಾಗರಾಜ ನಾಯ್ಕ, ರೇಖಾ ಮಂಜುನಾಥ, ಕುಮಾರಪ್ಪ, ವ್ಯವಸ್ಥಾಪಕ ವೆಂಕಟೇಶ್, ಇಂಜಿನಿಯರ್ ನಿಹಾರಿಕಾ, ಪರಿಸರ ಅಭಿಯಂತರ ಹರ್ಷಾ, ರವಿಕುಮಾರ, ನೈರ್ಮಲ್ಯ ಮೇಸ್ತ್ರಿಗಳು, ಸಿಬ್ಬಂದಿಯಿದ್ದರು.
Published on

ಸಂಡೂರು: ಕುರೇಕುಪ್ಪ ಪುರಸಭೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ನಿಷೇಧ ಮಾಡಲಾಗಿದೆ ಆದಕ್ಕಾಗಿ ತರಕಾರಿ, ಅಂಗಡಿ, ಹೊಟೇಲ್‌ಗಳಲ್ಲಿ ಬಟ್ಟೆ ಕೈಚೀಲಗಳನ್ನು ಬಳಸಿ ಒಂದು ವೇಳೆ ಪ್ಲಾಸ್ಟಿಕ್ ಬಳಸಿದಲ್ಲಿ ದಂಢ ವಿಧಿಸಲಾಗುವುದು ಎಂದು ಮುಖ್ಯಾಧಿಕಾರಿ ಸತೀಶ್ ಗುಡ್ಡೆ ಎಚ್ಚರಿಕೆ ನೀಡಿದರು.

ಪಟ್ಟಣದ ಪುರಸಭೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು. ಪ್ರತಿದಿನ ಪುರಸಭೆ ಕಸ ಸಂಗ್ರಹಣ ವಾಹನ ಬರುತ್ತದೆ ಆದರಲ್ಲಿ ಕಸ ಹಾಕಿ. ಬೀದಿಯಲ್ಲಿ ಎಲ್ಲೆಂದರಲ್ಲಿ ಹಾಕುವುದರಿಂದ ಸೊಳ್ಳೆ, ಹಂದಿ, ನಾಯಿ ಹಾವಳಿ ಹೆಚ್ಚಾಗಿ ರೋಗ ರುಜಿನೆಗಳು ಹೆಚ್ಚಾಗುತ್ತವೆ ಎಂದರು.

ತೋರಣಗಲ್ ಕೆಇಬಿ ಜೆಇ ಹರಿಪ್ರಸಾದ್ ಮಾತನಾಡಿ, ಸರ್ಕಾರ ಸೋಲಾರ್ ಸಿಸ್ಟಂ ಜಾರಿ ಮಾಡಿದೆ. ಸಾರ್ವಜನಿಕರು ಯಾರು ಹಾಕಿಸಿಕೊಂಡಲ್ಲಿ. ಒಂದು ಯೂನಿಟ್‌ಗೆ 70ಸಾವಿರ ರೂ.ಗಳಾಗುತ್ತದೆ, 30 ಸಾವಿರ ಸಬ್ಸಿಡಿ ದೊರೆಯುತ್ತಿದ್ದು, ಉಳಿದ 40ಸಾವಿರ ರೂ.ಕಟ್ಟಿದರೆ ನಾವೇ ಸೋಲಾರ್ ಸಿಸ್ಟಂ ಹಾಕಿ ಕೊಡುತ್ತೇವೆ ಎಂದರು.

ಪುರಸಭೆ ಸದಸ್ಯ ಎನ್.ಸೋಮಪ್ಪ, ಕುರೇಕುಪ್ಪ ಪುರಸಭೆ ಅಧ್ಯಕ್ಷ ಕೆ.ಕಲ್ಗುಡೆಪ್ಪ, ಉಪಾಧ್ಯಕ್ಷೆ ಜ್ಯೋತಿ ನಾರಾಯಣ, ಸದಸ್ಯರಾದ ಎಸ್.ಕೆ.ಮೆಹ ಬೂಬ್ ಬಾಷ, ಕಾರ್ಗಿಲ್ ಬಸವನಗೌಡ. ಲಕ್ಷ್ಮೀ ಹೊಸಗೇರಪ್ಪ, ನಾಗರಾಜ ನಾಯ್ಕ, ರೇಖಾ ಮಂಜುನಾಥ, ಕುಮಾರಪ್ಪ, ವ್ಯವಸ್ಥಾಪಕ ವೆಂಕಟೇಶ್, ಇಂಜಿನಿಯರ್ ನಿಹಾರಿಕಾ, ಪರಿಸರ ಅಭಿಯಂತರ ಹರ್ಷಾ, ರವಿಕುಮಾರ, ನೈರ್ಮಲ್ಯ ಮೇಸ್ತ್ರಿಗಳು, ಸಿಬ್ಬಂದಿಯಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net