ಕಟೀಲು ದೇವಳದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ : ಕೊಡೆತ್ತೂರುಗುತ್ತು ಸನತ್ ಕುಮಾರ ಶೆಟ್ಟಿ ಮಾಹಿತಿ

New Project (29)
Published on

ಕಟೀಲು: ಮುಜರಾಯಿ ಇಲಾಖೆ ಸೂಚನೆಯಂತೆ ಆ.15ರಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪ್ಲಾಸ್ಟಿಕ್ ಬಳಕೆ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಕಟೀಲು ದೇಗುಲ ಆಡಳಿತ ಮಂಡಳಿ ಅಧ್ಯಕ್ಷ ಕೊಡೆತ್ತೂರುಗುತ್ತು ಸನತ್ ಕುಮಾರ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ದೇಗುಲದ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಮಾತನಾಡಿ, ದೇಗುಲದಲ್ಲಿ ಈ ಹಿಂದೆಯೇ 2016ರಿಂದಲೇ ಪ್ಲಾಸ್ಟಿಕ್ ಬಳಕೆ ನಿಲ್ಲಿಸಲಾಗಿತ್ತು. ದೇವಳದ ಪ್ರಸಾದ ಪ್ಯಾಕೇಟ್‌ಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಲ್ಲಿಸಿದ್ದು, ಹೂವಿನ ಪ್ರಸಾದ ಸೇರಿದಂತೆ ಇತರ ಪ್ರಸಾದ ನೀಡಲು ಡಿಆರ್‌ಡಿಒ ಕಂಡುಹಿಡಿದ ಮೆಕ್ಕೆ ಜೋಳ ಮತ್ತು ಮರಗೆಣಸು ಇತ್ಯಾದಿ ವಸ್ತುಗಳಿಂದ ತಯಾರಿಸಲ್ಪಟ್ಟ ಚೀಲ ಕಳೆದ ಒಂದು ವರ್ಷದಿಂದ ಬಳಸುತ್ತಿದ್ದೇವೆ. ಶಾಲಾ ಕಾಲೇಜುಗಳ ಕಾರ್ಯಕ್ರಮಗಳಲ್ಲೂ ಪ್ಲಾಸ್ಟಿಕ್ ಬಳಸದಂತೆ ಎಚ್ಚರ ವಹಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ದಾನಿಗಳಾದ ಚಂದ್ರಶೇಕರ್ ಅವರ ಸಹಕಾರದಿಂದ ಸ್ಟೀಲ್ ಬಾಟಲ್ ನೀಡಲಾಗಿದೆ. ಕಳೆದ ವರ್ಷದಿಂದ ಕಟೀಲು ಮೇಳಗಳಲ್ಲೂ ಪ್ರತಿದಿನ ಪ್ಲಾಸ್ಟಿಕ್ ಬಳಸದಂತೆ ಜನಜಾಗೃತಿ ಬ್ಯಾನರ್ ಅಳವಡಿಸಲಾಗಿದ್ದು ಸಣ್ಣ ಮಟ್ಟಿನಲ್ಲಿ ಯಶಸ್ವಿಯಾಗಿದ್ದೇವೆ ಎಂದರು. ಕಿನ್ನಿಗೋಳಿ ಪಪಂ ಮುಖ್ಯಾಧಿಕಾರಿ ಜಯಶಂಕರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net