ಪ್ಲಾಸ್ಟಿಕ್​ ಸರ್ಜರಿ ತಪಾಸಣೆ

Ksd_Plastic ban
Published on

ವಿಜಯಪುರ: ನಗರದ ಬಿಎಲ್​ಡಿಇ ಡೀಮ್ಡ್​ ವಿಶ್ವವಿದ್ಯಾಲಯದ ಬಿ.ಎಂ. ಪಾಟೀಲ ಸೂಪರ್​ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ವಿಶ್ವ ಪ್ಲಾಸ್ಟಿಕ್​ ಸರ್ಜರಿ ದಿನಾಚರಣೆ ಅಂಗವಾಗಿ ಜು. 15 ರಂದು ಉಚಿತ ಪ್ಲಾಸ್ಟಿಕ್​ ಸರ್ಜರಿ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ನಡೆಯಲಿದೆ.

ಬಿಎಲ್​ಡಿಇ ಡೀಮ್ಡ್​ ವಿವಿ ಬಿ.ಎಂ. ಪಾಟೀಲ ವೈದ್ಯಕಿಯ ಮಹಾವಿದ್ಯಾಲಯದ ಶಸ ಚಿಕಿತ್ಸೆ ವಿಭಾಗದಿಂದ ಅಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 1ರ ವರೆಗೆ ಶಿಬಿರ ಆಯೋಜಿಸಲಾಗಿದೆ.

ಪ್ಲಾಸ್ಟಿಕ್​ ಸರ್ಜರಿ ತ ವೈದ್ಯ ಡಾ. ವಿಜಯಕುಮಾರ ಹುಡೇದ ಮತ್ತು ಡಾ. ಅನಿಕೇತನ ವಲ್ಲಭ ಶಿಬಿರದ ನೇತೃತ್ವ ವಹಿಸಲಿದ್ದು, ಸಾರ್ವಜನಿಕರು ಶಿಬಿರದ ಸದುಪಯೋಗ ಪಡೆಯಬೇಕೆಂದು ಆಸ್ಪತ್ರೆಯ ವೈದ್ಯಕಿಯ ನಿರ್ದೇಶಕ ಡಾ. ವಿಜಯಕುಮಾರ ಕಲ್ಯಾಣಪ್ಪಗೋಳ ಮತ್ತು ಶಸಚಿಕಿತ್ಸೆ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ ಕೋಟೆಣ್ಣವರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net