ಪ್ಲಾಸ್ಟಿಕ್ ಮುಕ್ತ ಪ್ರಶಂಸಾ ಪತ್ರ ವಿತರಣೆ

plastic avoid
ಪಟ್ಟಣ ಪಂಚಾಯತಿಯಿಂದ ಪ್ಲಾಸ್ಟಿಕ ಮುಕ್ತ ಅಭಿಯಾನ 2023 ಪ್ರಶಂಸನಾ ಪತ್ರವನ್ನು ಪಟ್ಟಣದ ಅಂಗಡಿಗಳ ಮಾಲೀಕರಿಗೆ ವಿತರಣೆ ಮಾಡಲಾಯಿತು. ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ತಿಮ್ಮಪ್ಪ ಜಗ್ಲಿ, ಪಟ್ಟಣ ಪಂಚಾಯತಿ ಸದಸ್ಯರಾದ ಹಸೇನ್ ಅಲಿ ಸಾಬ್, ಸೂರಿ ದುರುಗಣ್ಣ ನಾಯಕ, ಕೃಷ್ಣ ನಾಯಕ, ಹಾಜಿ ಚೌದ್ರಿ, ಅಜಿತ್ ಕುಮಾರ್ ಹೊನ್ನುಟಗಿ, ಮೌಲಸಾಬ್ ವರ್ಚಸ್, ಮುಖಂಡರಾದ ನಾಗರಾಜ ಚಿನ್ನಾನ್ ಇದ್ದರು.
Published on

ಸಿರವಾರ: ಪಟ್ಟಣ ಪಂಚಾಯತಿಯಿಂದ ಪ್ಲಾಸ್ಟಿಕ ಮುಕ್ತ ಅಭಿಯಾನ 2023 ಪ್ರಶಂಸನಾ ಪತ್ರವನ್ನು ಪಟ್ಟಣದ ಅಂಗಡಿ ಮಾಲೀಕರಿಗೆ ವಿತರಣೆ ಮಾಡುವುದರ ಮೂಲಕ ಪ್ಲಾಸ್ಟಿಕ್ ಮುಕ್ತತೆಗೆ ಕರೆ ನೀಡಲಾಯಿತು.

ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ತಿಮ್ಮಪ್ಪ ಜಗ್ಲಿ ಮಾತನಾಡಿ. ಪ್ಲಾಸ್ಟಿಕ್ ಬಳಕೆ ಜೀವ ಸಂಕುಲಕ್ಕೆ ಹಾನಿ, ಪ್ಲಾಸ್ಟಿಕ್ ಬದಲಾಗಿ ಕಾಗದ ಅಥವಾ ನಾರಿನ ಚೀಲ ಬಳಸಿ. ಅಂಗಡಿಗಳ ಮಾಲೀಕರು ಗ್ರಾಹಕರು ಬಂದಾಗ ಪ್ಲಾಸ್ಟಿಕ್ ನೀಡದೆ ಕಾಗದ ಅಥವಾ ನಾರಿನ ಚೀಲ ನೀಡಬೇಕು.

ಅದೇ ರೀತಿ ಸಾರ್ವಜನಿಕರು ಅಂಗಡಿಗಳಿಗೆ ಮನೆಯಿಂದಲೇ ಬಟ್ಟೆ ಚೀಲಗಳನ್ನು ತೆಗೆದುಕೊಂಡು ಹೋಗಬೇಕು, ರಸ್ತೆ, ಚರಂಡಿಯಲ್ಲಿ ಪ್ಲಾಸ್ಟಿಕ ಎಸೆಯದೆ ಪಟ್ಟಣ ಪಂಚಾಯತ ವಾಹನ ಬಂದಾಗ ಅದರಲ್ಲಿ ಹಾಕುವ ಮೂಲಕ ಸ್ವಚ್ಚ ಪ್ಲಾಸ್ಟಿಕ್ ಮುಕ್ತ ಪಟ್ಟಣವಾಗಿಸಲು ಕೈ ಜೋಡಿಸಿ ಎಂದರು.

ಪಟ್ಟಣ ಪಂಚಾಯತಿ ಸದಸ್ಯರಾದ ಹಸೇನ್ ಅಲಿ ಸಾಬ್, ಸೂರಿ ದುರುಗಣ್ಣ ನಾಯಕ, ಕೃಷ್ಣ ನಾಯಕ, ಹಾಜಿ ಚೌದ್ರಿ, ಅಜಿತ್ ಕುಮಾರ್ ಹೊನ್ನುಟಗಿ, ಮೌಲಸಾಬ್ ವರ್ಚಸ್, ಮುಖಂಡರಾದ ನಾಗರಾಜ ಚಿನ್ನಾನ್, ವಿರೇಶ ಗಡ್ಲ, ಆರೋಗ್ಯ ನಿರೀಕ್ಷಕಿ ಸುನೀತಾ ಸಜ್ಜನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net