ಪ್ಲಾಸ್ಟಿಕ್ ರಾಷ್ಟ್ರಧ್ವಜ ಮಾರಾಟ ನಿಷೇಧಿಸಿ

map
ಹಿಂದು ಜನಜಾಗೃತಿ ಸಮಿತಿ ಪದಾಧಿಕಾರಿಗಳು ತಹಸೀಲ್ದಾರ್ ಗೀರಿಶಬಾಬುಗೆ ಶನಿವಾರ ಮನವಿ ಸಲ್ಲಿಸಿದರು. ಸಮಿತಿ ಪದಾಧಿಕಾರಿಗಳಾದ ಚಿದಾನಂದ, ಮಹಾಂತೇಶ, ಮೋಹನ, ಪ್ರವೀಣ ಬಣಕಾರ, ನೇತ್ರಕುಮಾರ, ಸತೀಶ ಇತರರಿದ್ದರು.
Published on

ಹರಪನಹಳ್ಳಿ: ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನವಾಗದಂತೆ ಹಾಗೂ ಸರ್ಕಾರ ನಿಷೇಧಿಸಿದ ಪ್ಲಾಸ್ಟಿಕ್ ಧ್ವಜಗಳನ್ನು ಮಾರಾಟ ಮಾಡದಂತೆ ತಡೆಗಟ್ಟಲು ಮುಂಜಾಗೃತವಾಗಿ ಕ್ರಮವಹಿಸಬೇಕು ಎಂದು ಹಿಂದು ಜನಜಾಗೃತಿ ಸಮಿತಿ ಪದಾಧಿಕಾರಿಗಳು ಶನಿವಾರ ತಹಸೀಲ್ದಾರ್ ಗೀರಿಶಬಾಬುಗೆ ಮನವಿ ಸಲ್ಲಿಸಿದರು.


ಸಮಿತಿ ಮುಖಂಡ ಶಿವಾನಂದ ಹುಲೇನರ್ ಮಾತನಾಡಿ, ರಾಷ್ಟ್ರಧ್ವಜ ದೇಶದ ಭಾವೈಕ್ಯದ ಸಂಕೇತವಾಗಿದೆ. ಆಗಸ್ಟ್ 15, ಜನವರಿ 26 ರಂದು ರಾಷ್ಟ್ರಧ್ವಜವನ್ನು ಹೆಮ್ಮೆಯಿಂದ ಪ್ರದರ್ಶಿಸಲಾಗುತ್ತದೆ. ಆದರೆ ಅದೇ ದಿನ ಕಾಗದದ/ಪ್ಲಾಸ್ಟಿಕ್‌ನ ಸಣ್ಣ-ಸಣ್ಣ ರಾಷ್ಟ್ರಧ್ವಜಗಳು ರಸ್ತೆ, ಕಸ ಮತ್ತು ಚರಂಡಿಗಳಲ್ಲಿ ಹರಿದ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬರುತ್ತದೆ.

ಅಭಿಯಾನ

ಇದನ್ನು ತಡೆಯಲು ಹಿಂದು ಜನಜಾಗೃತಿ ಸಮಿತಿ ಪ್ರತಿವರ್ಷ ಇಂತಹ ಅಭಿಯಾನದ ಮೂಲಕ ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಾ ಬಂದಿದೆ. ಆದ್ದರಿಂದ ಅಧಿಕಾರಿಗಳು ಸರ್ಕಾರದ ಅಧಿನಿಯಮಗಳನ್ನು ಧಿಕ್ಕರಿಸಿ ಪ್ಲಾಸ್ಟಿಕ್ ಧ್ವಜಗಳನ್ನು ಮಾರಾಟ ಮಾಡುವ ಮತ್ತು ಬಳಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net