ಪಡಿತರದಲ್ಲಿ ಪ್ಲಾಸ್ಟಿಕ್ ಕಲಬೆರಕೆ !

plastic rice web
Published on

ಬೆಳ್ಮಣ್: ಕಾರ್ಕಳ ತಾಲೂಕಿನ ಬೆಳ್ಮಣ್ ಶಾಖೆಯ ಪಡಿತರ ಅಂಗಡಿಯಲ್ಲಿ ವಿತರಣೆಯಾದ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಪತ್ತೆಯಾಗಿದೆ.
ಗ್ರಾಮಸ್ಥರೊಬ್ಬರು ಮನೆಗೆ ಕೊಂಡುಹೋದ ಅಕ್ಕಿಯನ್ನು ನೀರಿನಲ್ಲಿ ಹಾಕಿದಾಗ ತೇಲುತ್ತಿತ್ತು. ಇದನ್ನು ಗಮನಿಸಿದಾಗ ಪ್ಲಾಸ್ಟಿಕ್ ಅಕ್ಕಿಯ ರೂಪದಲ್ಲಿದ್ದು, ಕೂಡಲೇ ಅಧಿಕಾರಿಗಳಿಗೆ ಹಾಗೂ ಸ್ಥಳೀಯ ಪಂಚಾಯಿತಿಗೆ ಮಾಹಿತಿ ನೀಡಿದ್ದಾರೆ.

ನ್ಯಾಯಬೆಲೆಯ ಅಂಗಡಿಯವರು ಕಾರ್ಕಳದ ಪಡಿತರ ಮುಖ್ಯಕೇಂದ್ರಕ್ಕೆ ಹಾಗೂ ಆಹಾರ ಇಲಾಖೆಯ ಅಧಿಕಾರಿಗೆ ತಿಳಿಸಿದ ಪರಿಣಾಮ ಇಲಾಖೆಯ ಅಧಿಕಾರಿಗಳು ಎಚ್ಚೆತ್ತು ಪರಿಶೀಲನೆ ಆರಂಭಿಸಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಕಾರ್ಕಳ ತಹಸೀಲ್ದಾರ್ ಪುರಂದರ ಹೆಗ್ಡೆ ಭೇಟಿ ನೀಡಿದ್ದು, ಸಮಗ್ರ ತನಿಖೆ ಭರವಸೆ ನೀಡಿದ್ದಾರೆ.\

ಪಡಿತರ ಪಡೆದ ವ್ಯಕ್ತಿಯ ಒಟ್ಟು ಅಕ್ಕಿಯಲ್ಲಿ 10 ಗ್ರಾಂನಷ್ಟು ಮಾತ್ರ ಸಾಬಕ್ಕಿ ರೀತಿಯ ಅಕ್ಕಿಗಳು ಪತ್ತೆಯಾಗಿವೆ. ಹಲವು ಗೋಣಿ ಚೀಲಗಳನ್ನು, ಗೋದಾಮಿನಲ್ಲಿಯೂ ಪರಿಶೀಲನೆ ಮಾಡಲಾಗುತ್ತದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು.ಪುರಂದರ ಹೆಗ್ಡೆತಹಸೀಲ್ದಾರ್ ಕಾರ್ಕಳ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net