ಪ್ಲಾಸ್ಟಿಕ್‌ನಿಂದ ಮನುಕುಲದ ವಿನಾಶ

mdg 2 (1)
Published on

ಮೂಡಿಗೆರೆ: ವಿಶ್ವ ಪರಿಸರ ದಿನದ ಅಂಗವಾಗಿ ಹಸಿರು ಫೌಂಡೇಷನ್ ನಿಂದ ಪರಿಸರ ಸಂರಕ್ಷಣಾ ಜಾಥಾ ನಡೆಯಿತು. ನಂತರ ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಗಿಡ ನೆಡುವ ಮೂಲಕ ಹಸಿರು ಫೌಂಡೇಷನ್ ಅಧ್ಯಕ್ಷ ರತನ್ ಊರುಬಗೆ ಮಾತನಾಡಿ, ಪರಿಸರ ಸಂರಕ್ಷಣೆ ಜತೆಗೆ ಪ್ಲಾಸ್ಟಿಕ್ ಮುಕ್ತವಾಗಿಸಲು ವಿದ್ಯಾರ್ಥಿಗಳು ದೃಢ ಸಂಕಲ್ಪ ಮಾಡಬೇಕು. ಪರಿಸರ ಸಂರಕ್ಷಣೆ ಕೇವಲ ದಿನಾಚರಣೆಗೆ ಸೀಮಿತವಾಗಬಾರದು ಎಂದರು.

ಪ್ಲಾಸ್ಟಿಕ್‌ನಿಂದ ಮನುಕುಲದ ವಿನಾಶವಾಗುತ್ತದೆ. ಸರ್ಕಾರ ಪ್ಲಾಸ್ಟಿಕ್ ನಿಷೇಧಿಸಿದರೂ ಅದರ ಬಳಕೆ ನಿರಂತರವಾಗಿ ಸಾಗಿದೆ. ಅದಕ್ಕೆ ಕಡಿವಾಣ ಹಾಕಲು ಸ್ಥಳೀಯ ಸಂಸ್ಥೆಗಳಿಗೆ ಸರ್ಕಾರ ನಿರ್ದೇಶನ ನೀಡಬೇಕು. ಜನಸಾಮಾನ್ಯರು ಪ್ಲಾಸಿಕ್‌ನಿಂದ ದೂರ ಸರಿಯಬೇಕು ಎಂದರು.

ವಲಯ ಅರಣ್ಯಾಧಿಕಾರಿ ಕಾವ್ಯಾ ಮಾತನಾಡಿ, ಪರಿಸರ ಉಳಿಸಲು ಪ್ಲಾಸ್ಟಿಕ್ ನಿಯಂತ್ರಣ ಅಗತ್ಯ. ಮಲೆನಾಡಿನಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿವೆ. ಪ್ರಕೃತಿ ಸಂಪತ್ತು ಕೂಡ ಹೆಚ್ಚಾಗಿದೆ. ಜನಸಾಮಾನ್ಯರು ಅರಣ್ಯ ಇಲಾಖೆಯೊಂದಿಗೆ ಕೈ ಜೋಡಿಸಿದರೆ ಪರಿಸರ ಸಂರಕ್ಷಣೆ ಸುಲಭವಾಗುತ್ತದೆ ಎಂದು ತಿಳಿಸಿದರು.

ಪಪಂ ಸದಸ್ಯ ಪಿ.ಜಿ.ಅನುಕುಮಾರ್, ಪಿಎಸ್‌ಐ ಶ್ರೀನಾಥ್ ರೆಡ್ಡಿ, ಕಣಚೂರು ವಿನೋದ್, ಸಂಜಯ್ ಕೊಟ್ಟಗೆಹಾರ, ಉಪವಲಯ ಅರಣ್ಯಾಧಿಕಾರಿ ರಂಜಿತ್, ಕುಮಾರ್, ಶಿಕ್ಷಕರಾದ ಶ್ರೀನಿವಾಸ್, ಹಸಿರು ಫೌಂಡೇಷನ್ ನಿರ್ದೇಶಕರಾದ ವಿನುಪ್ರಸಾದ್, ಅಭಿಜಿತ್, ಸುನಿಲ್, ಜಯಂತ್, ಪೂರ್ಣೆಶ್, ರತನ್, ಪ್ರದೀಪ್, ಸುಮಂತ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net