

ಬೆಳಗಾವಿ: ನಗರದಲ್ಲಿ ನಿಷೇಧಿತ ಏಕ ಬಳಕೆಯ ಪ್ಲಾಸ್ಟಿಕ್ ಬಳಕೆ ಮತ್ತು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ನೇತೃತ್ವದಲ್ಲಿ ಪಾಲಿಕೆಯ ಆರೋಗ್ಯ ಅಧಿಕಾರಿಗಳ ದಾಳಿ ನಡೆಸಿ200ಕೆಜಿ ಪ್ಲಾಸ್ಟಿಕ್ ವಶಪಡಿಸಿಕೊಂಡಿದ್ದಾರೆ.
ನಗರದ ರವಿವಾರ ಪೇಟ, ಪಾಂಗುಳ್ ಗಲ್ಲಿಯಲ್ಲಿ ಬುಧವಾರ ಅಂಗಡಿಗಳು ಮತ್ತು ವಾಣಿಜ್ಯ ಮಳಿಗೆಗಳು ದಾಳಿ ನಡೆಸಿದರು. ಈ ವೇಳೆ200 ಕೆಜಿ ನಿಷೇಧಿತ ಪ್ಲಾಸ್ಟಿಕ್ ವಶಪಡಿಸಿಕೊಂಡರು. ಅಲ್ಲದೆ ಅಂಗಡಿಕಾರರಿಗೆ 35ಸಾವಿರ ರೂ. ದಂಡ ಹಾಕಿ ಎಚ್ಷರಿಕೆನೀಡಿದರು.