ಮಾಲಿನ್ಯ ನಿಯಂತ್ರಿಸದಿದ್ದರೆ ಜೀವಸಂಕುಲಕ್ಕೆ ಉಳಿಗಾಲವಿಲ್ಲ: ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು ಹನುಮಂತು

Plastic free environment slogan campaign Mandya
Published on

ಮಂಡ್ಯ: ಇಂದಿನ ಜಗತ್ತಿನಲ್ಲಿ ಹೆಚ್ಚುತ್ತಿರುವ ದುಷ್ಟ ಮಾಲಿನ್ಯ ನಿಯಂತ್ರಿಸದಿದ್ದರೆ ಜೀವ ಸಂಕುಲಗಳಿಗೆ ಉಳಿಗಾಲವಿಲ್ಲ ಎಂದು ಅಲಯನ್ಸ್ ಸಂಸ್ಥೆಯ ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು ಕಳವಳ ವ್ಯಕ್ತಪಡಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ರಸ್ತೆಯಂಚಿನದಲ್ಲಿ ಕೃಷಿಕ ಅಲಯನ್ಸ್ ಸಂಸ್ಥೆ, ಸ್ನೇಹಬಳಗ ಅಲಯನ್ಸ್ ಸಂಸ್ಥೆ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಮತ್ತು ಪ್ಲಾಸ್ಟಿಕ್ ಮುಕ್ತ ಪರಿಸರ ಘೋಷವಾಕ್ಯ ಅಭಿಯಾನಕ್ಕೆ ಸಸಿ ನೆಡುವುದರ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಪ್ರಪಂಚ ಎಲ್ಲ ದೇಶಗಳು ಪ್ಲಾಸ್ಟಿಕ್ ಬಳಕೆ, ಅರಣ್ಯನಾಶ ಮತ್ತು ಜಾಗತಿಕ ತಾಪಮಾನ ಏರಿಕೆಯಂತಹ ದೊಡ್ಡ ದೊಡ್ಡ ಸವಾಲುಗಳನ್ನು ಎದುರಿಸುತ್ತಿದೆ. ಪ್ರಕೃತಿ ವಿಕೋಪದ ಅನಾಹುತಗಳು, ಅವಘಡಗಳು ಹೆಚ್ಚಾಗಲು ಮನುಷ್ಯದ ದುರ್ಬುದ್ಧಿಯೇ ಕಾರಣ ಎನ್ನುವುದು ಎಲ್ಲರಿಗೂ ಗೊತ್ತಿದೆ. ಇನ್ನಾದರೂ ಪರಿಸರ ದಿನ ಮನೆ, ಊರೂರು, ಕೇರಿಬೀದಿಗಳ ಹಬ್ಬವಾಗಬೇಕಿದೆ. ಒಂದು ಮನೆಗೆ 10 ಸಸಿ ನೆಡುವ ಹೊಣೆಗಾರಿಗೆ ಹೆಚ್ಚಾಗಬೇಕಿದೆ. ಸಂಘ ಸಂಸ್ಥೆಗಳ ಪಾತ್ರ ಪರಿಸರ ಕಾಳಜಿಯಾಗಿ ಮೆರೆಯಬೇಕಿದೆ ಎಂದು ಸಲಹೆ ನೀಡಿದರು.

ಅಲಯನ್ಸ್ ಸಂಸ್ಥೆಯ 1ನೇ ಉಪ ಗವರ್ನರ್ ಕೆ.ಆರ್.ಶಶಿಧರ್ ಈಚಗೆರೆ, 2ನೇ ಉಪ ಗವರ್ನರ್ ಚಂದ್ರಶೇಖರ್, ಪದಾಧಿಕಾರಿಗಳಾದ ಪ್ರೊ.ಡೇವಿಡ್, ಡಾ.ಶಿವಕುಮಾರ್, ಮಲ್ಲೇಶ್, ರಾಮಲಿಂಗೇಗೌಡ, ಪುರುಷೋತಮ್, ಜೋಗಿಗೌಡ, ರಾಮರಾವ್, ಲೋಕೇಶ್, ಉದಯಶಂಕರ್, ಜಯಶಂಕರ್, ಯೋಗೇಶ್, ರಾಧಾಕೃಷ್ಣ, ಪ್ರವೀಣ್, ರಾಮಯ್ಯ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net