ಹತ್ತಿಬಟ್ಟೆ ಚೀಲ ವಿತರಿಸುವ ಯೋಜನೆ ಸ್ವಾಗತಾರ್ಹ: ಸಂಸದ ಕ್ಯಾ.ಬ್ರಿಜೇಶ್ ಚೌಟ ಹರ್ಷ : ಮೂಲ್ಕಿ ನಪಂ ಪ್ಲಾಸ್ಟಿಕ್‌ಮುಕ್ತ ಅಭಿಯಾನ

New Project (38)
Published on

ಮೂಲ್ಕಿ: ಪ್ಲಾಸ್ಟಿಕ್ ಕೈಚೀಲ ಬಳಸದಿರುವ ಹವ್ಯಾಸ ರೂಪಿಸಲು ಮೂಲ್ಕಿ ನಗರ ಪಂಚಾಯಿತಿಯಿಂದ ಹತ್ತಿಬಟ್ಟೆ ಚೀಲ ವಿತರಿಸುವ ಯೋಜನೆ ಸ್ವಾಗತಾರ್ಹ ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.

ಮೂಲ್ಕಿ ನಗರದ ರಿಕ್ಷಾ ಪಾರ್ಕ್ ಬಳಿ ಮೂಲ್ಕಿ ನಗರ ಪಂಚಾಯಿತಿ ವತಿಯಿಂದ ಪ್ಲಾಸ್ಟಿಕ್‌ಮುಕ್ತ ಅಭಿಯಾನದಡಿ ಬಟ್ಟೆ ಕೈ ಚೀಲ ವಿತರಿಸಿ ಮಾತನಾಡಿದರು.

ಸಮಗ್ರ ಅಭಿವೃದ್ಧಿಯ ಯೋಜನೆಯಡಿ, ಮೂಲ್ಕಿ ರಾಷ್ಟ್ರೀಯ ಹೆದ್ದಾರಿ ಸರ್ವೀಸ್ ರಸ್ತೆ ಅಭಿವೃದ್ಧಿ ಹಾಗೂ ಇನ್ನಿತರ ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ಯೋಜನೆ ಕಾರ್ಯಗತ ಸಂದರ್ಭ ಪರಿಶೀಲನೆ ನಡೆಸಿ ದಿನನಿತ್ಯ ಆಗುವ ಅಪಘಾತಗಳಿಂದ ರಕ್ಷಣೆಗೆ ವಿಶೇಷ ಯೋಜನೆ ಕೈಗೊಳ್ಳಲಾಗುವುದು ಎಂದರು.

ಶಾಸಕ ಉಮಾನಾಥ ಎ.ಕೋಟ್ಯಾನ್ ಮಾತನಾಡಿ, ಬಟ್ಟೆ ಚೀಲ ಉಪಯೋಗದ ಹವ್ಯಾಸವು ಪರಿಸರ ರಕ್ಷಣೆಯ ಜತೆಗೆ ಗ್ರಾಮೀಣ ಗುಡಿ ಕೈಗಾರಿಕೆಗೆ ಒತ್ತು ನೀಡುವ ಕಾರಣ ಮಹಿಳೆಯರಿಗೆ ಉತ್ತಮ ವೃತ್ತಿ ನೀಡಿದಂತಾಗುತ್ತದೆ ಎಂದರು.

ಮೂಲ್ಕಿ ನಗರ ಪಂಚಾಯಿತಿ ಅಧ್ಯಕ್ಷ ಸತೀಶ್ ಅಂಚನ್, ಉಪಾಧ್ಯಕ್ಷೆ ಲಕ್ಷ್ಮೀ, ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷರಾಜ ಶೆಟ್ಟಿ, ಸದಸ್ಯರಾದ ವಂದನಾ ಕಾಮತ್, ಶೈಲೇಶ್ ಕುಮಾರ್, ಸುಭಾಷ್ ಶೆಟ್ಟಿ, ರಾಧಿಕಾ ಕೋಟ್ಯಾನ್, ಭೀಮಾ ಶಂಕರ್, ಮುಖ್ಯಾಧಿಕಾರಿ ಮಧುಕರ್, ಮಾಜಿ ಸದಸ್ಯರಾದ ಉಮೇಶ್ ಮಾನಂಪಾಡಿ, ಪುರುಷೋತ್ತಮ ಬಡಗಹಿತ್ಲು, ಸ್ಥಳೀಯ ಬಿಜೆಪಿ ನಾಯಕರಾದ ದಿನೇಶ್ ಪುತ್ರನ್ ಬಳ್ಕುಂಜೆ, ರಂಗನಾಥ ಶೆಟ್ಟಿ, ಮನೋಹರ ಕೋಟ್ಯಾನ್, ವಿಕಾಸ್ ಶೆಟ್ಟಿ, ಶ್ಯಾಮ್ ಪ್ರಸಾದ್, ಸದಾನಂದ ಸಾಲ್ಯಾನ್ ಧರ್ಮಸಾನ, ವಿಠ್ಠಲ್ ಎನ್.ಎಂ, ಹರಿಶ್ಚಂದ್ರ ಕೋಟ್ಯಾನ್, ದೇವಪ್ರಸಾದ್ ಕೆಂಪುಗುಡ್ಡೆ, ನವೀನ್ ರಾಜ್, ಅಶೋಕ್ ಜನನಿ, ಮಹೀಮ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net