ದೊಡ್ಡಬೆಳವಂಗಲದಲ್ಲಿ ಪ್ಲಾಸ್ಟಿಕ್​ ನಿಷೇಧ ಜಾಥಾ

Untitled-3
ದೊಡ್ಡಬಳ್ಳಾಪುರದ ದೊಡ್ಡಬೆಳವಂಗಲ ಗ್ರಾಮ ಪಂಚಾಯಿತಿಯಿಂದ ಆಯೋಜಿಸಿದ್ದ ಪ್ಲಾಸ್ಟಿಕ್​ ನಿಷೇಧ ಜಾಥಾಗೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎನ್​.ಮುನಿರಾಜು ಚಾಲನೆ ನೀಡಿದರು. ದೊಡ್ಡಬೆಳವಂಗಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆದರ್ಶ ಕುಮಾರ್​, ಸದಸ್ಯರು, ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಸ್ವ&ಸಹಾಯ ಸಂದ ಮಹಿಳೆಯರು ಇದ್ದರು.
Published on

ದೊಡ್ಡಬಳ್ಳಾಪುರ: ಪರಿಸರ ರಕ್ಷಣೆ ಉದ್ದೇಶದಿಂದ ಏಕ ಬಳಕೆ ಪ್ಲಾಸ್ಟಿಕ್​ ಬಳಕೆಯನ್ನು ಸಾರ್ವಜನಿಕರು ನಿಲ್ಲಿಸಿ, ಪರಿಸರ ಸಂರಕ್ಷಣೆಗೆ ಸಹಕಾರ ನೀಡಬೇಕು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮುನಿರಾಜು ತಿಳಿಸಿದರು.

ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ನೇತೃತ್ವದಲ್ಲಿ ದೊಡ್ಡಬೆಳವಂಗಲ ಗ್ರಾಮ ಪಂಚಾಯಿತಿ ವತಿಯಿಂದ ಬುಧವಾರ ಪ್ಲಾಸ್ಟಿಕ್​ ಬಳಕೆ ನಿಷೇಧ ಕುರಿತ ಜಾಥಾ ಉದ್ಘಾಟಿಸಿ ಮಾತನಾಡಿದರು. ಪ್ಲಾಸ್ಟಿಕ್​ ವಸ್ತುಗಳು ನೆಲದಲ್ಲಿ ನಾಶವಾಗದೆ ಹಲವು ವರ್ಷಗಳು ಉಳಿಯುತ್ತವೆ. ಇದು ಮಣ್ಣಿನ ಗುಣಮಟ್ಟವನ್ನು ಹಾಗೂ ಪರಿಸರವನ್ನು ಹಾಳು ಮಾಡುತ್ತದೆ ಮತ್ತು ನೀರಿನ ಮೂಲಗಳನ್ನು ಕೂಡ ವಿಷಕಾರಿ ಮಾಡುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ತಿಳಿದು ಜವಾಬ್ದಾರಿಯುತವಾಗಿ ನಡೆದು ಪ್ಲಾಸ್ಟಿಕ್​ ಬಳಕೆಯನ್ನು ತ್ಯಜಿಸಬೇಕು ಎಂದರು.

ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಜಾಗತಿಕವಾಗಿ ಪ್ಲಾಸ್ಟಿಕ್​ ಮಾಲಿನ್ಯವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಒಂದು ತಿಂಗಳ ಕಾಲ ವಿಶೇಷ ಆಂದೋಲನವನ್ನು ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಆಯೋಜಿಸಿ ಪ್ಲಾಸ್ಟಿಕ್​ ಮಾಲಿನ್ಯವನ್ನು ತಡೆಗಟ್ಟಲು ಕರೆ ನೀಡಿದರು. ಸಾರ್ವಜನಿಕ ಸ್ಥಳಗಳಾದ ಹೋಟೆಲ್​ ಮತ್ತು ಬೇಕರಿಗಳಲ್ಲಿ ಆಹಾರ ಪದಾರ್ಥಗಳನ್ನು ಪ್ಯಾಕ್​ ಮಾಡುವಲ್ಲಿ ಪ್ಲಾಸ್ಟಿಕ್​ ಕವರ್​ ಬಳಸಿ ಪ್ಯಾಕ್​ ಮಾಡಿದರೆ, ಅಂತಹ ಹೋಟೆಲ್​ ಮುಚ್ಚಲಾಗುವುದು. ಕಾಫೀ/ಟೀ ಇತ್ಯಾದಿಗಳನ್ನು ಪ್ಲಾಸ್ಟಿಕ್​ ಕವರ್ನಲ್ಲಿ ಹಾಕಿ ಪ್ಯಾಕ್​ ಮಾಡಿ ಬಳಸಿದರೆ ಕ್ಯಾನ್ಸರ್​ ರೋಗ ಬರುತ್ತದೆ. ಇಂತಹ ಅಭ್ಯಾಸವನ್ನು ಸರ್ಕಾರ ನಿಷೇಧಿಸಿದ್ದು, ಇದನ್ನು ಉಲ್ಲಂನೆ ಮಾಡಿದರೆ ದಂಡ ವಿಧಿಸಲಾಗುವುದು ಎಂದು ತಿಳಿಸಿದರು.

ಜಾಥಾದಾರರು ಪ್ಲಾಸ್ಟಿಕ್​ ತ್ಯಜಿಸೋಣ ಪರಿಸರ ಉಳಿಸೋಣ, ಹಸಿರು ಹಳ್ಳಿ ಸುಸ್ಥಿರ ಭವಿಷ್ಯ ಎಂಬ ೂಷಣೆಯೊಂದಿಗೆ, ದೊಡ್ಡಬೆಳವಂಗಲದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿ ಅಂಗಡಿ, ಪ್ರಾವಿಜನ್​ ಸ್ಟೋರ್​, ಬೇಕರಿ, ಬಟ್ಟೆ ಅಂಗಡಿ, ಹೋಟೆಲ್​, ಬೀದಿ ಬದಿ ವ್ಯಾಪಾರಿಗಳು ಸೇರಿ ಇತರೆ ಸ್ಥಳಗಳಲ್ಲಿ ಪ್ಲಾಸ್ಟಿಕ್​ ನಿಷೇಧ ಕುರಿತು ಜನರಲ್ಲಿ ಅರಿವು ಮೂಡಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net