

ಸುಂಟಿಕೊಪ್ಪ: ಗ್ರಾಮ ಪಂಚಾಯಿತಿ ಹಾಗೂ ಸ್ವಚ್ಛ ಭಾರತ್ ಮಿಷನ್ ವತಿಯಿಂದ ಮರು ಬಳಕೆಯಾಗದ ಪ್ಲಾಸ್ಟಿಕ್ ನಿಷೇಧ ಅಭಿಯಾನವನ್ನು ಭಾನುವಾರ ನಡೆಸಲಾಯಿತು.
ಸ್ವಚ್ಛ ಬಾರತ್ ಮಿಷನ್ ಅಭಿಯಾನದ ಅನ್ವಯ ಕನ್ನಡ ವೃತ್ತದಲ್ಲಿ ಜಾಗೃತಿ ಮೂಡಿಸಲಾಯಿತು. ಮರು ಬಳಕೆಯಾಗದ ಪ್ಲಾಸ್ಟಿಕ್ ಕೈಚೀಲ, ಪ್ಲಾಸ್ಟಿಕ್ ತಟ್ಟೆ, ಲೋಟ, ಬಾಟಲಿಗಳನ್ನು ಉಪಯೋಗಿಸುವುದು ಮತ್ತು ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧವೆಂದು ಪಟ್ಟಣದ ವ್ಯಾಪಾರಿ ಮಳಿಗೆಗಳಿಗೆ ಭೇಟಿ ಜಾಗೃತಿ ಹಾಗೂ ಬಳಕೆ ನಿಷೇಧ ದಂಡ ವಿಧಿಸುವ ಬಗ್ಗೆ ಮಾಹಿತಿಯನ್ನು ನೀಡಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನಿಲ್‌ಕುಮಾರ್, ಅಭಿವೃದ್ಧಿ ಅಧಿಕಾರಿ ವಿ.ಜಿ.ಲೋಕೇಶ್, ಸದಸ್ಯರಾದ ರಫೀಕ್‌ಖಾನ್, ಪಿ.ಎಫ್.ಸಬಾಸ್ಟೀನ್, ಮಂಜುನಾಥ್, ಪಂಚಾಯಿತಿ ಲೆಕ್ಕಪರಿಶೋಧಕಿ ಚಂದ್ರಕಲಾ, ಗಣಕ ಯಂತ್ರ ಸಿಬ್ಬಂದಿ ಸಂಧ್ಯಾ, ಕರವಸೂಲಿಗಾರ ಶ್ರೀನಿವಾಸ್ ಹಾಗೂ ಪೌರಕಾರ್ಮಿಕರು ಇದ್ದರು.