ಕಾವೇರಿ ಪಬ್ಲಿಕ್ ಶಾಲೆ ವಿದ್ಯಾರ್ಥಿಗಳಿಂದ ಜಾಗೃತಿ

24_10_Mdy_07(Jagruthi)
Published on

ಮಂಡ್ಯ: ತಾಲೂಕಿನ ರಾಗಿಮುದ್ದನಹಳ್ಳಿ ಗ್ರಾಮದ ಕಾವೇರಿ ಪಬ್ಲಿಕ್ ಶಾಲೆ ವಿದ್ಯಾರ್ಥಿಗಳು ನಗರದಲ್ಲಿ ವಿವಿಧ ಅಂಗಡಿಗಳಿಗೆ ಪರಿಸರ ಸ್ನೇಹಿ ಪೇಪರ್ ಚೀಲಗಳನ್ನು ನೀಡಿ ಜಾಗೃತಿ ಮೂಡಿಸಿದರು.

ಶಾಲೆಯ ವಿಜ್ಞಾನ ಮತ್ತು ಪರಿಸರ ಸಂಘದ ವಿದ್ಯಾರ್ಥಿಗಳು ನಗರದ ಅಂಗಡಿಗಳಲ್ಲಿ ಪ್ಲಾಸ್ಟಿಕ್‌ನಿಂದಾಗುವ ದುಷ್ಪರಿಣಾಮದ ಬಗ್ಗೆ ವಿವರಿಸಿದರು. ಜತೆಗೆ ಶಾಲೆಯ ವಿದ್ಯಾರ್ಥಿಗಳೇ ತಯಾರಿಸಿದ ಪೇಪರ್ ಚೀಲಗಳನ್ನು ಅಂಗಡಿ ಮಾಲೀಕರಿಗೆ ನೀಡುವ ಮೂಲಕ ಪ್ಲಾಸ್ಟಿಕ್‌ನಿಂದ ತಯಾರಿಸಿರುವ ಕೈಚೀಲಗಳನ್ನು ಬಳಸಬಾರದೆಂದು ಮನವಿ ಮಾಡಿದರು.

ಮಾರ್ಗದರ್ಶಿ ಶಿಕ್ಷಕರಾದ ಪ್ರಶಾಲಿನಿ, ಮುರಳೀಧರ, ರಾಘವೇಂದ್ರ, ಮನುಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net