

ಮಾನ್ವಿ: ಪಟ್ಟಣದ ವಿವಿಧ ಅಂಗಡಿಗಳ ಮೇಲೆ ಭಾನುವಾರ ಪುರಸಭೆ ನೈರ್ಮಲ್ಯ ಅಧಿಕಾರಿ ಹಂಪಯ್ಯ ನೇತೃತ್ವದಲ್ಲಿ ದಾಳಿ ನಡೆಸಿ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್‌ಗಳನ್ನು ವಶಪಡಿಸಿಕೊಳ್ಳಲಾಯಿತು.
ಪ್ಲಾಸ್ಟಿಕ್ ಕ್ಯಾರಿ ಬ್ಯಾಗಗಳನ್ನು ಮಾರದಂತೆ ಅನೇಕ ಬಾರಿ ಅಂಗಡಿ ಮಾಲೀಕರಿಗೆ ನೋಟಿಸ್ ನೀಡಲಾಗಿದೆ. ಅಲ್ಲದೆ ದಾಳಿ ಮಾಡಿ ಎಚ್ಚರಿಸಲಾಗಿದೆ. ಆದರೂ ಸಹ ಮಾರಾಟ ಮಾಡುತ್ತಿದ್ದಾರೆ. ಕ್ಯಾರೀ ಬ್ಯಾಗಗಳಿಂದ ಪರಿಸರಕ್ಕೆ ಹಾನಿಯಾಗಲಿದೆ. ದನಕರುಗಳು ಪ್ಲಾಸ್ಟಿಕ್ ತಿಂದು ಜೀವ ಕಳೆದುಕೊಳ್ಳುತ್ತವೆ ಎಂದು ಪುರಸಭೆ ನೈರ್ಮಲ್ಯ ಅಧಿಕಾರಿ ಹಂಪಯ್ಯ ತಿಳಿಸಿದರು.
40 ಮೈಕ್ರಾನ್‌ಗಿಂತ ಹೆಚ್ಚಿನ ಗುಣಮಟ್ಟದ ಪ್ಲಾಸ್ಟಿಕ್ ಮಾತ್ರ ಉತ್ಪಾದಿಸುವುದು ಮತ್ತು ಮಾರಾಟ ಮಾಡುವ ನಿಯಮ ಜಾರಿಯಲ್ಲಿದೆ. ಕಾನೂನು ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಪುರಸಭೆ ಕಿರಿಯ ನೈರ್ಮಲ್ಯ ಅಧಿಕಾರಿ ಮಹೇಶ, ಪೌರಕಾರ್ಮಿಕ ಸಿಬ್ಬಂದಿ ಇದ್ದರು.