ನಿಷೇಧಿತ ಪ್ಲಾಸ್ಟಿಕ್ ವಶ

26sunti02
Published on

ಸುಂಟಿಕೊಪ್ಪ: ಇಲ್ಲಿನ ಸಂತೆ ಮಾರುಕಟ್ಟೆಯ ಕೆಲವು ಅಂಗಡಿಗಳ ಮೇಲೆ ದಾಳಿ ನಡೆಸಿದ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಹಾಗೂ ಸ್ವಚ್ಛ ಭಾರತ್ ಮಿಷನ್ ಧಿಕಾರಿಗಳು ದಾಸ್ತಾನು ಇರಿಸಿದ ನಿಷೇಧಿತ ಪ್ಲಾಸ್ಟಿಕ್‌ಕವರ್‌ಗಳನ್ನು ಭಾನುವಾರ ವಶಕ್ಕೆ ಪಡೆದರು.

ಗ್ರಾಮ ಪಂಚಾಯಿತಿಯಿಂದ ಪ್ಲಾಸ್ಟಿಕ್ ನಿಷೇಧ ಕುರಿತು ಇತ್ತೀಚೆಗೆ ಜಾಗೃತಿ ಅಭಿಯಾನ ಕೈಗೊಳ್ಳಲಾಗಿತ್ತು. ಇದೀಗ ಸಂತೆ, ಮಾರುಕಟ್ಟೆಯಲ್ಲಿ ದಾಳಿ ನಡೆಸಿ ಪ್ಲಾಸ್ಟಿಕ್ ಕೈ ಚೀಲಗಳನ್ನು ವಶಪಡಿಸಿಕೊಳ್ಳುವ ಮೂಲಕ ಮತ್ತಷ್ಟು ಜಾಗೃತಿ ಮೂಡಿಸಲಾಯಿತು. ಇದರೊಂದಿಗೆ ವ್ಯಾಪಾರಸ್ಥರಿಂದ ದಂಡವನ್ನು ವಸೂಲಿ ಮಾಡುವ ಮೂಲಕ ಎಚ್ಚರಿಕೆ ನೀಡಲಾಯಿತು.ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಜಿ.ಲೋಕೇಶ್, ಗಣಕ ಯಂತ್ರ ಸಿಬ್ಬಂದಿ ಸಂಧ್ಯಾ, ಕರವಸೂಲಿಗಾರ ಶ್ರೀನಿವಾಸ್ ,ಮಂಜುನಾಥ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net