ಓಂಕಾರೇಶ್ವರ ದೇವಾಲಯದ ಭತ್ತದ ಗದ್ದೆಯಲ್ಲಿ ನಾಟಿ ಕಾರ್ಯ

MDK08
Published on

ಮಡಿಕೇರಿ: ಓಂಕಾರೇಶ್ವರ ದೇವಾಲಯದ ಪುಷ್ಕರಣಿಯ ಪಕ್ಕದಲ್ಲಿ ಸಾಂಪ್ರದಾಯಿಕ ಹುತ್ತರಿ ಹಬ್ಬಕ್ಕೆ ಕದಿರು ತೆಗೆಯುವ ಸಲುವಾಗಿ ನಿರ್ಮಿಸಿರುವ ಗದ್ದೆಯಲ್ಲಿ ವರ್ಷಂಪ್ರತಿಯಂತೆ ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ವತಿಯಿಂದ ಕೊಡಗು ಜಿಲ್ಲಾ ಜಾನಪದ ಪರಿಷತ್‌ನ ಸಹಯೋಗದೊಂದಿಗೆ ಶನಿವಾರ ಸಾಂಪ್ರದಾಯಿಕ ನಾಟಿ ನೆಡುವ ಕಾರ್ಯ ಹಮ್ಮಿಕೊಳ್ಳಲಾಗಿತ್ತು.


ಬೆಳಿಗ್ಗೆ ಮಕ್ಕಳು, ಮಹಿಳೆ, ಪುರುಷ, ವೃದ್ಧರಾದಿಯಾಗಿ ಪಾಲ್ಗೊಂಡು ನಾಟಿನೆಟ್ಟರು. ಸಮಾಜ ಸೇವಕ ವಾಸು ಕುಟ್ಟಯ್ಯರವರು ಸಿದ್ಧಪಡಿಸಿ ತಂದಿದ್ದ ಅಗೆಯನ್ನು ಎಲ್ಲರೂ ಸೇರಿ ನೆಟ್ಟರು.


ದೇವಾಲಯ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ರಮೇಶ್ ಹೊಳ್ಳ, ಸಮಿತಿ ಕಾರ್ಯನಿರ್ವಹಣಾಧಿಕಾರಿ ಪಿ.ಎಲ್.ದೇವರಾಜ್, ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ, ಹಿರಿಯ ಸದಸ್ಯರುಗಳಾದ ಅಂಬೆಕಲ್ ಕುಶಾಲಪ್ಪ, ಸುಶೀಲ ಕುಶಾಲಪ್ಪ, ಹಾ.ತಿ.ಜಯಪ್ರಕಾಶ್, ಮೊಣ್ಣಂಡ ಶೋಭಾ ಸುಬ್ಬಯ್ಯ, ಬೊಟ್ಟೋಳಂಡ ಕಾಶಿ ಕಾವೇರಪ್ಪ, ಪುದಿಯನೆರವನ ರೇವತಿ ರಮೇಶ್, ಚೊಕ್ಕಾಡಿ ಪ್ರೇಮಾ ರಾಘವಯ್ಯ, ಸಿದ್ದರಾಜು ಬೆಳ್ಳಯ್ಯ, ರೋಟರಿ ಮಿಸ್ಟಿ ಹಿಲ್ಸ್ ಮಾಜಿ ಅಧ್ಯಕ್ಷ ಅಂಬೆಕಲ್ ವಿನೋದ್, ಮಡಿಕೇರಿ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಕುಡೆಕಲ್ ಸಂತೋಷ್, ಡಾ.ಅನುಶ್ರೀ ಅನಂತಶಯನ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net