

ಕೋಟ: ಕೋಡಿ ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಗೀತಾನಂದ ಫೌಂಡೇಶನ್ ಮಣೂರು, ಪಂಚವರ್ಣ ಸಂ ಕೋಟ ಇವರ ಸಂಯೋಜನೆಯೊಂದಿಗೆ ಶಿಶು ಅಭಿವೃದ್ಧಿ ಯೋಜನೆ ಬ್ರಹ್ಮಾವರ, ಸಮನ್ವಯ ಸಂಜೀವಿನಿ ಒಕ್ಕೂಟ ಕೋಡಿ ಹಾಗೂ ಎಸ್‌ಎಲ್‌ಆರ್‌ಎಂ ಟಕ ಕೋಡಿ ಇವರ ಸಹಕಾರದೊಂದಿಗೆ ಕೋಡಿ ಗ್ರಾಮ ಪಂಚಾಯಿತಿ ಸದಸ್ಯ ಪ್ರಭಾಕರ್ ಮೆಂಡನ್ ಮತ್ತು ಕೃಷ್ಣ ಪೂಜಾರಿ ವಾರ್ಗದರ್ಶನದಲ್ಲಿ ಗಿಡ ನಾಟಿ ಕಾರ್ಯಕ್ರಮ ಕೋಡಿ ಕನ್ಯಾನ ಪರಿಸರದಲ್ಲಿ ನಡೆಯಿತು.
ಕೋಡಿ ಕನ್ಯಾನದ ಗಾಯತ್ರಿ ವಿದ್ಯಾಶಂಕರ್ ಚಾಲನೆ ನೀಡಿದರು. ಕೋಡಿ ಕನ್ಯಾನ ಅಂಗನವಾಡಿ ಕಾರ್ಯಕರ್ತೆ ಪ್ರೀತಿ.ಎಸ್ ಹಾಗೂ ಸಂಗೀತಾ ನೇತೃತ್ವ ವಹಿಸಿದ್ದರು.
ಗ್ರಾಮ ಪಂಚಾಯಿತಿ ಸದಸ್ಯ ಜಯಶ್ರೀ ಪೂಜಾರಿ, ಕುವಾರಿ ಸರಸ್ವತಿ, ಖಔ್ಕ ಸಿಬ್ಬಂದಿ ವಸಂತಿ ಹಾಗೂ ಸ್ಥಳೀಯರಾದ ಕಾವೇರಿ, ಬಿಂದು ಹಾಗೂ ರೋಣಕ್ ಪೂಜಾರಿ ಉಪಸ್ಥಿತರಿದ್ದರು.