ಗಿಡ-ಮರ ನೆಡುವುದರಿಂದ ಆರೋಗ್ಯ ಮಟ್ಟ ಸುಧಾರಣೆ ಸಾಧ್ಯ

gida mara
gida mara
Published on

ಹೆಬ್ರಿ: ಗಿಡ-ಮರ ನೆಡುವುದರಿಂದ ಜಾಗತಿಕ ತಾಪಮಾನ ತಗ್ಗಿಸಬಹುದು. ಮಣ್ಣಿನ ಸವಕಳಿ ತಡೆಗಟ್ಟಬಹುದು. ನೆಟ್ಟಿರುವ ಗಿಡ-ಮರಗಳು ಶುದ್ಧ ಆಮ್ಲಜನಕ ಬಿಡುಗಡೆ ಮಾಡುವುದರಿಂದ ಆರೋಗ್ಯ ಮಟ್ಟ ಸುಧಾರಿಸಿಕೊಳ್ಳಬಹುದು ಎಂದು ಸೀತಾನದಿ ಉಪವಲಯ ಅರಣ್ಯಾಧಿಕಾರಿ ಪ್ರದೀಪ್ ಹೇಳಿದರು.

ಮುದ್ರಾಡಿ ಎಂ.ಎನ್.ಡಿ.ಎಸ್.ಎಂ. ಅನುದಾನಿತ ಪ್ರೌಢಶಾಲೆಯ ಕಲ್ಪನಾ ಪರಿಸರ ಸಂಘ, ಹೆಬ್ರಿ ಅರಣ್ಯ ಇಲಾಖೆ ಜಂಟಿ ಸಹಯೋಗದಲ್ಲಿ ನಡೆದ ಇಳೆಗೈಸಿರಿ ವನಮಹೋತ್ಸವ ಕಾರ್ಯಕ್ರಮದಲ್ಲಿ ಪ್ರತಿ ಮಗುವಿನ ಮನೆಗೊಂದು ಗಿಡ ವಿತರಿಸಿ ಮಾತನಾಡಿದರು.

ವಿದ್ಯಾಸಾಗರ್ ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿ ಅಶೋಕ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಅರಣ್ಯ ಇಲಾಖೆ ದೇವಾನಂದ್, ಕಲ್ಪನಾ ಪರಿಸರ ಸಂಘ ಅಧ್ಯಕ್ಷ ಶೋಭಿತ್ ಯು.ಪೂಜಾರಿ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪರಿಸರ ಸಂಘದ ಮಾರ್ಗದರ್ಶಿ ಶಿಕ್ಷಕಿ ಶ್ಯಾಮಲಾ ಕೊಠಾರಿ ನಿರೂಪಿಸಿದರು. ಮಹೇಶ್ ನಾಯ್ಕ ಕೆ. ವಂದಿಸಿದರು. ಶಿಕ್ಷಕರಾದ ರಘುಪತಿ ಹೆಬ್ಬಾರ್, ಚಂದ್ರಕಾಂತಿ ಹೆಗ್ಡೆ, ಸಿಬ್ಬಂದಿ ಮಹೇಶ ಎಂ., ಶಾಲಾ ವಿದ್ಯಾರ್ಥಿ ನಾಯಕ ಕಾರ್ತಿಕ್ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net