ಎಳೇ ವಯಸ್ಸಿನಲ್ಲಿ ಕೃಷಿ ಜ್ಞಾನ ಅವಶ್ಯ : ನಾಟಿ ಕಾರ್ಯಕ್ರಮದಲ್ಲಿ ಪ್ರಾಂಶುಪಾಲೆ ಡಾ.ಗೀತಾ ಸಲಹೆ

batha nati
ಪಾಜಕ ಆನಂದತೀರ್ಥ ವಿದ್ಯಾಲಯದ ವಿದ್ಯಾರ್ಥಿಗಳು ಭತ್ತದ ನಾಟಿ ಕಾರ್ಯದಲ್ಲಿ ತೊಡಗಿಕೊಂಡರು
Published on

ಶಿರ್ವ: ಇಂದಿನ ವಿದ್ಯಾರ್ಥಿಗಳಿಗೆ ನೈಜ ಕೃಷಿಯ ಮಾಹಿತಿ ಕೊರತೆ ಇದೆ. ಪಾಲಕರು ಕೂಡ ಈ ಕಾರ್ಯ ಮಾಡದಿರುವುದು ವಿಷಾದ. ಮಕ್ಕಳಿಗೆ ಕನಿಷ್ಠ ಅಕ್ಕಿ ಉತ್ಪತ್ತಿ ಆಗುವ ವಿಧಾನವೂ ಅರಿವಿಲ್ಲ. ಎಳೆಯ ವಯಸ್ಸಿನಲ್ಲೇ ಕೃಷಿ ಜ್ಞಾನ ಪಡೆದುಕೊಂಡರೆ ಅನುಕೂಲ ಎಂದು ಪ್ರಾಂಶುಪಾಲೆ ಡಾ.ಗೀತಾ ಶಶಿಧರ್ ಹೇಳಿದರು.

ಪಾಜಕ ಆನಂದತೀರ್ಥ ವಿದ್ಯಾಲಯದ ವಿದ್ಯಾರ್ಥಿಗಳಿಗಾಗಿ ಶಾಲಾ ಆಡಳಿತ ಮಂಡಳಿ ಸದಸ್ಯ ಹಾಗೂ ಕುರ್ಕಾಲು ಗ್ರಾ.ಪಂ ಸದಸ್ಯ ಸುದರ್ಶನ ರಾವ್ ಅವರ ಗದ್ದೆಯಲ್ಲಿ ಆಯೋಜಿಸಲಾಗಿದ್ದ ನಾಟಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಭತ್ತದ ನಾಟಿ ಕಾಯಕ್ರಮದಲ್ಲಿ ಭಾಗವಹಿಸಿದ ಹೈಸ್ಕೂಲ್ ವಿದ್ಯಾರ್ಥಿಗಳು ಮಾಹಿತಿ ಪಡೆದುಕೊಂಡರು. ಶಾಲಾ ಆಡಳಿತ ಮಂಡಳಿ ಸದಸ್ಯ ಸುದರ್ಶನ ರಾವ್, ಸಂಯೋಜಕಿ ವಿಜೇತಾ, ಶಿಕ್ಷಕರಾದ ರಾಘವೇಂದ್ರ ರಾವ್, ಜ್ಯೋತಿ ಜಿ, ವಿದ್ಯಾ, ಸುನಾಲಿನಿ, ಸಂತೋಷ್ ಕುಮಾರ್ ಶೆಟ್ಟಿ, ಕಲ್ಮೇಶ್, ಮಮತಾ, ಸುಮನಾ ಹಾಗೂ ವಿದ್ಯಾರ್ಥಿಗಳು ಉಪಾಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net