ಗಿಡ ಬೆಳಸುವುದು ಪ್ರತಿಯೊಬ್ಬರ ಜವಾಬ್ದಾರಿ:ಮುಖ್ಯ ಶಿಕ್ಷಕ ಪರಶುರಾಮ ಸಾಲ್ಮನಿ

ald
ಬೆಟಗೇರಿ ಸರ್ಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಹಸಿರು ಪಡೆ ಕೊಪ್ಪಳ, ಸರ್ ಸಿ.ವಿ.ರಾಮನ್ ಇಕೋ ಕ್ಲಬ್ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಗಿಡ ನೆಡಲಾಯಿತು.
Published on

ಅಳವಂಡಿ: ಪ್ರತಿಯೊಬ್ಬ ವಿದ್ಯಾರ್ಥಿ ಮನೆಯ ಆವರಣ ಮತ್ತು ಜಮೀನುಗಳ ಬದುಗಳಲ್ಲಿ ಗಿಡ, ಮರ ಬೆಳೆಸಿ ಪೋಷಿಸುವ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದು ಮುಖ್ಯ ಶಿಕ್ಷಕ ಪರಶುರಾಮ ಸಾಲ್ಮನಿ ಹೇಳಿದರು.

ಸಮೀಪದ ಬೆಟಗೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಹಸಿರು ಪಡೆ ಕೊಪ್ಪಳ, ಸರ್ ಸಿ.ವಿ.ರಾಮನ್ ಇಕೋ ಕ್ಲಬ್ ಮಂಗಳವಾರ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.
ಇತ್ತೀಚಿನ ವರ್ಷಗಳಲ್ಲಿ ಪರಿಸರ ಮಾಲಿನ್ಯ ವಿಪರೀತವಾಗಿದ್ದು, ಗಾಳಿ, ಕುಡಿವ ನೀರು ವಿಷಯುಕ್ತವಾಗುತ್ತಿವೆ. ಮಳೆ ಪ್ರಮಾಣ ಕೂಡ ಕಡಿಮೆಯಾಗುತ್ತಿದ್ದು, ಎಲ್ಲರೂ ಜಾಗೃತರಾಗಿ ಪರಿಸರ ಉಳಿಸಿ ಬೆಳೆಸೋಣ. ಪರಿಸರಕ್ಕೆ ನಾವೇನು ಕೊಡದಿದ್ದರೂ ಪರಿಸರ ಹಾಳು ಮಾಡುವುದನ್ನು ಬಿಡಬೇಕೆಂದರು. ಶಿಕ್ಷಕರಾದ ಸಿರಸಪ್ಪ ಗಡಾದ, ರಾಜಾಸಾಬ್, ಪ್ರಕಾಶ, ಸುರೇಶ, ತುಕಾರಾಂ, ಪ್ರಕಾಶ, ಸುಷ್ಮಾ, ನಿರ್ಮಲಾ, ನಾರಾಯಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net