

ಕೋಟ: ಪರಿಸರ ಸ್ನೇಹಿ ಅಭಿಯಾನದ ಹಸಿರು ಜೀವ ಯೋಜನೆ 10ನೇ ವಾರದ ಮನೆಗೊಂದ್ದು ಗಿಡ ನೆಡುವ ಕಾರ್ಯಕ್ರಮ ಭಾನುವಾರ ನಡೆಯಿತು.
ಪಂಚವರ್ಣ ಸಂಸ್ಥೆ ಕೋಟ ಮಾರ್ಗದರ್ಶನದಲ್ಲಿ ಗೀತಾನಂದ ಫೌಂಡೇಶನ್ ಮಣೂರು ಕೊಡಮಾಡಿದ ಗಿಡಗಳನ್ನು ಗ್ರಾಪಂ ಕೋಡಿ, ಶಿಶು ಅಭಿವೃದ್ಧಿ ಯೋಜನೆ ಬ್ರಹ್ಮಾವರ ಹಾಗೂ ಸಮನ್ವಯ ಸಂಜೀವಿನಿ ಒಕ್ಕೂಟ ಕೋಡಿ ನೇತೃತ್ವದಲ್ಲಿ ಹೊಸಬೆಂಗ್ರೆ ಮೂರ್ತೆದಾರ ಸಂಘ ಅಧ್ಯಕ್ಷ ಕೊರಗ ಪೂಜಾರಿ ಮನೆಯಲ್ಲಿ ಹಮ್ಮಿಕೊಳ್ಳಲಾಯಿತು. ಕೋಡಿ ಗ್ರಾಪಂ ಅಧ್ಯಕ್ಷೆ ಗೀತಾ ಖಾರ್ವಿ ಹಾಗೂ ಸದಸ್ಯ ಕೃಷ್ಣ ಪೂಜಾರಿ ಚಾಲನೆ ನೀಡಿದರು. ಸಂಜೀವಿನಿ ಒಕ್ಕೂಟ ಅಧ್ಯಕ್ಷೆ ದೀಪಾ ಆರ್.ಖಾರ್ವಿ ಹಾಗೂ ಅಂಗನವಾಡಿ ಕಾರ್ಯಕರ್ತೆ ಯಮುನಾ ಎಲ್.ಕುಂದರ್, ಸ್ಥಳೀಯರಾದ ಬೇಬಿ, ಸುಜಾತಾ ಆರ್.ಖಾರ್ವಿ, ನಾಗರತ್ನ, ಪ್ರೇಮಾ ಸುರೇಶ್ ಮತ್ತು ಆಶಾ ಎಸ್. ಉಪಸ್ಥಿತರಿದ್ದರು.