

ಬೆಳ್ತಂಗಡಿ: ಗುಂಡೂರಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಗುರುವಾಯನಕೆರೆ ವತಿಯಿಂದ ನೆಲ, ಜಲ,ಪ್ರಾಣಿ, ಸಂಕುಲ ಮತ್ತು ವನ ಸಂರಕ್ಷಣೆಯ ಪ್ರಯುಕ್ತ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮದಡಿ ಪ್ರಗತಿ ಬಂಧು ತಂಡಗಳಿಗೆ ಗಿಡ ವಿತರಣಾ ಕಾರ್ಯಕ್ರಮ ನಡೆಯಿತು.
ಆರಂಬೋಡಿ ಗ್ರಾ.ಪಂ ಅಧ್ಯಕ್ಷ ಪ್ರವೀಣ್ ಚಂದ್ರ ಜೈನ್ ಕಾರ್ಯಕ್ರಮ ಉದ್ಘಾಟಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ದಯಾನಂದ ಪೂಜಾರಿ ಮಾತನಾಡಿ, ಡಾ.ಹೆಗ್ಗಡೆಯವರು ಸಂಕಲ್ಪಿಸಿದಂತೆ ಕಾಡುಪ್ರಾಣಿಗಳಿಗೆ ಬೇಕಾಗುವ ಹಣ್ಣು-ಹಂಪಲು ದೊರೆಯುವಂತೆ ಮಾಡಲು ರಾಜ್ಯದ ವಿವಿಧ ಅರಣ್ಯಗಳಲ್ಲಿ ಅರಣ್ಯ ಇಲಾಖೆಯ ಒಪ್ಪಿಗೆ ಮೇರೆಗೆ ಹಣ್ಣಿನ ಗಿಡವನ್ನು ಸಾರ್ವಜನಿಕ ಸ್ಥಳಗಳಲ್ಲಿ, ಶಾಲೆ ಕಾಲೇಜುಗಳ ಹೊರಾಂಗಣದಲಿ,್ಲ ಅರಣ್ಯದಲ್ಲಿ ಈ ವರ್ಷ ಈಗಾಗಲೇ ಗಿಡ ನಾಟಿ ಮಾಡಲಾಗಿದೆ. ಪ್ರಗತಿ ಬಂದು ತಂಡದ ಸದಸ್ಯರಿಗೆ ತಮ್ಮ ಜಮೀನಿನಲ್ಲಿ ನಾಟಿ ಮಾಡಲು ಸೂಕ್ತವಾದ ರಂಬಾಟನ್, ಮ್ಯಾಂಗೋ ಸ್ಟೀನ, ಜಂಬುನೇರಳೆ, ಮಕುಟದೇವ, ಅಮೃತ್ ನೋನಿ, ನೇರಳೆ, ಹೀಗೆ ವಿವಿಧ ಹಣ್ಣಿನ ಗಿಡ ವಿತರಿಸಿದ್ದು, ಉತ್ತಮ ರೀತಿಯಲ್ಲಿ ಗಿಡ ಬೆಳೆಸಬೇಕು ಎಂದರು.
ಹೊಸಂಗಡಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಣೇಶ್ ಶೆಟ್ಟಿ ಮಾತನಾಡಿ, ಹಸಿರು ಉಳಿದರೆ ನಮ್ಮೆಲ್ಲರ ಜೀವ ಉಳಿಯುವುದು. ಹಣ್ಣಿನ ಗಿಡಗಳನ್ನು ಬೆಳೆಸಿದರೆ ಮನುಷ್ಯ ಮಾತ್ರವಲ್ಲ ಪ್ರಾಣಿ ಪಕ್ಷಿಗಳಿಗೂ ಆಹಾರ ಹಾಗೂ ಆಶ್ರಯ ಸಿಗುತ್ತದೆ. ಪ್ರತಿಯೊಬ್ಬರು ಶುಭ ಕಾರ್ಯಗಳಿಗೆ ಗಿಡ ನಾಟಿ ಮಾಡಬೇಕು ಎಂದರು.
ಒಕ್ಕೂಟದ ಅಧ್ಯಕ್ಷ ಸದಾನಂದ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ರಮೇಶ್ ಪೂಜಾರಿ, ಗ್ರಾಮ ಸಮಿತಿ ಅಧ್ಯಕ್ಷರು ಶೇಷಪ್ಪ ಪೂಜಾರಿ ಹೊಸಂಗಡಿ ವಲಯ ಮೇಲ್ವಿಚಾರಕಿ ವೀಣಾ, ಕೃಷಿ ಮೇಲ್ವಿಚಾರಕ ಕೃಷ್ಣ, ಸೇವಾ ಪ್ರತಿನಿಧಿ ಹರೀಶ್ ಪೂಜಾರಿ, ಒಕ್ಕೂಟದ ಪದಾಧಿಕಾರಿಗಳು, ಪ್ರಗತಿ ಬಂಧು ಸ್ವಸಹಾಯ ತಂಡದ ಸದಸ್ಯರು ಉಪಸ್ಥಿತರಿದ್ದರು.