ಪ್ರತಿಯೊಬ್ಬರೂ ಪರಿಸರ ಸಮತೋಲನೆ ಕಾಪಾಡಿ : ಶಾಸಕ ವೆಂಕಟರಾವ ನಾಡಗೌಡ ಸಲಹೆ

250520 Sindhanuru 300 Planting at PWD Junior Collage
Published on

ಸಿಂಧನೂರು: ಪರಿಸರ ಸಂರಕ್ಷಣೆಯಲ್ಲಿ ವನಸಿರಿ ಫೌಂಡೇಶನ್ ಕಾರ್ಯ ಶ್ಲಾಘನೀಯವಾದುದು ಎಂದು ಶಾಸಕ ವೆಂಕಟರಾವ ನಾಡಗೌಡ ಹೇಳಿದರು.

ನಗರದ ಪಿಡಬ್ಲ್ಯುಡಿಕ್ಯಾಂಪ್ ಜೂನಿಯರ್ ಕಾಲೇಜ್ ಮೈದಾನದಲ್ಲಿ ವಾಕಿಂಗ್ ಟ್ರಾಕ್‌ನಲ್ಲಿ ಸೋಮವಾರ ವನಸಿರಿ ಫೌಂಡೇಶನ್ ಜಿಲ್ಲಾ ಘಟಕ ಆಶ್ರಯದಲ್ಲಿ ಹಮ್ಮಿಕೊಂಡ 300 ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು. ಕಳೆದ ಮೂರು ವರ್ಷಗಳಿಂದ ವನಸಿರಿ ಫೌಂಡೇಶನ್ ತಾಲೂಕು ಸೇರಿ ಇತರ ಕಡೆಗಳಲ್ಲಿ ಸಸಿಗಳನ್ನು ಬೆಳೆಸುವಲ್ಲಿ ಮಹತ್ವದ ಕೆಲಸ ಮಾಡುತ್ತಿದೆ. ಪ್ರತಿಯೊಬ್ಬರೂ ಸಸಿ ನೆಡುವ ಮೂಲಕ ಪರಿಸರ ಸಮತೋಲನೆ ಕಾಪಾಡಿಕೊಳ್ಳಬೇಕು ಎಂದರು.

ವನಸಿರಿ ಫೌಂಡೇಶನ್ ಜಿಲ್ಲಾ ಘಟಕ ಅಧ್ಯಕ್ಷ ಅಮರೇಗೌಡ ವಿರೂಪಾಪುರ ಮಾತನಾಡಿ, ಜೂನ್‌ನಲ್ಲಿ ಸಾವಿರಾರು ಸಸಿ ನೆಡುವ ಉದ್ದೇಶ ಹೊಂದಲಾಗಿದೆ. ಸಾಂಕೇತಿಕವಾಗಿ ಶಾಸಕರು ಚಾಲನೆ ನೀಡಿದ್ದಾರೆ ಎಂದರು. ನಗರಸಭೆ ಮಾಜಿ ಸದಸ್ಯ ಲಿಂಗರಾಜ ಹೂಗಾರ, ಭೀಮನಗೌಡ ಕೋಳಬಾಳ, ಶಂಕರಗೌಡ ಎಲೆಕೂಡ್ಲಿಗಿ, ವನಸಿರಿ ಫೌಂಡೇಶನ್ ಪದಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net