ಗಿಡ ನೆಡುವ ಅಭಿಯಾನ

12
Published on

ಮೈಸೂರು: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮೈಸೂರು ರಾಯಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಎಂಆರ್‌ಎಟಿ ಹಾಗೂ ಎನ್‌ಎಸ್‌ಎಸ್ ಘಟಕದ ಸಹಯೋಗದೊಂದಿಗೆ ವಿಶೇಷ ತಾಂತ್ರಿಕ ಮಾತುಕತೆ ಮತ್ತು ಗಿಡ ನೆಡುವ ಅಭಿಯಾನ ನಡೆಸಲಾಯಿತು.

ವೈದ್ಯರಾದ ಡಾ.ಎ.ಶರ್ಮಿಳಾ ಅವರು, ಪ್ಲಾಸ್ಟಿಕ್ ಮಾಲಿನ್ಯವನ್ನು ಎದುರಿಸುವ ಬಗ್ಗೆ ವಿವರಿಸಿ, ಇತ್ತೀಚಿನ ಸಂಶೋಧನೆಗಳು ಮಾನವ ಮಿದುಳು ಸೇರಿದಂತೆ ಭೂಮಿಯ ಮೇಲಿನ ಬಹುತೇಕ ಎಲ್ಲದರಲ್ಲೂ ಸೂಕ್ಷ್ಮ ಪ್ಲಾಸ್ಟಿಕ್‌ಗಳು ಇವೆ ಎಂದು ಸೂಚಿಸಿವೆ. 2025ರ ವಿಶ್ವ ಪರಿಸರ ದಿನವು ಪ್ಲಾಸ್ಟಿಕ್ ಮಾಲಿನ್ಯವನ್ನು ನಿಭಾಯಿಸಲು ಕ್ರಮ ಕೈಗೊಳ್ಳಬೇಕಿದೆ ಎಂದು ಹೇಳಿದರು.

ಎಂಆರ್‌ಇಟಿ ಕಾರ್ಯದರ್ಶಿ ನಂದಿನಿ ನರಸಿಂಹಮೂರ್ತಿ, ಎಂಆರ್‌ಇಟಿ ಖಜಾಂಚಿ ಡಾ.ಎಲ್.ಸಮಲಿಂಗಯ್ಯ, ವಿಭಾಗದ ಇಲಾಖೆಗಳ ಮುಖ್ಯಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net