ಸಸಿ ನೆಡುವುದು ಒಳ್ಳೆಯ ಕಾರ್ಯ

21MDLG1
Published on

ಮೂಡಲಗಿ: ಜನಸಾಮಾನ್ಯರ ಜತೆ ಬೆರೆಯುತ್ತಿರುವ ಯುವ ನಾಯಕ ಸವೋರ್ತ್ತಮ ಜಾರಕಿಹೊಳಿ ಜನ್ಮದಿನ ನಿಮಿತ್ತ 24 ಸಾವಿರ ಸಸಿ ನೆಡುವ ಕಾರ್ಯ ಹಮ್ಮಿಕೊಂಡಿರುವುದು ಶ್ಲಾನೀಯ ಎಂದು ಮುನ್ಯಾಳ&ರಂಗಾಪುರ ಹಾಗೂ ಬಾಗೋಜಿಕೊಪ್ಪದ ಡಾ.ಶಿವಲಿಂಗ ಮುರುರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಯಾದವಾಡ ಗ್ರಾಮದಲ್ಲಿ ಯುವ ನಾಯಕ ಸವೋರ್ತ್ತಮ ಜಾರಕಿಹೊಳಿ 24ನೇ ಜನ್ಮ ದಿನಾಚರಣೆ ನಿಮಿತ್ತ ಅರಬಾವಿ ೇತ್ರದಲ್ಲಿ ಈಚೆಗೆ ಜಾರಕಿಹೊಳಿ ಅಭಿಮಾನಿಗಳಿಂದ ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು. ಮರಗಳನ್ನು ಕಡಿದು ನಾಶ ಮಾಡುತ್ತಿರುವುದರಿಂದ ಸರಿಯಾದ ಸಮಯದಲ್ಲಿ ಮಳೆಯಾಗುತ್ತಿಲ್ಲ. ಸಸಿ ನೆಡುವಂತಹ ಸಾಮಾಜಿಕ ಕಾರ್ಯ ಮಾಡುತ್ತಿರುವುದು ಒಳ್ಳೆಯದು ಎಂದರು.

ಸುಣಧೋಳಿ ಜಡಿಸಿದ್ದೇಶ್ವರ ಮಠದ ಪೀಠಾಧಿಪತಿ ಶಿವಾನಂದ ಸ್ವಾಮೀಜಿ ಮಾತನಾಡಿ, ಸಸಿ ನೆಡುವುದರಿಂದ ಸಾಕಷ್ಟು ಆಮ್ಲಜನಕ ಸಿಗುತ್ತದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಈ ಕಾರ್ಯ ಇತರರಿಗೆ ಮಾದರಿ ಎಂದರು. ಕಪರಟ್ಟಿ&ಖಂಡ್ರಟ್ಟಿಯ ಬಸವರಾಜ ಹಿರೇಮಠ ಶ್ರೀ ಮಾತನಾಡಿ, ಸವೋರ್ತ್ತಮ ಜಾರಕಿಹೊಳಿ ಅವರು ಜನ್ಮದಿನದ ಆಡಂಬರ ಬಿಟ್ಟು ಸಮಾಜಕ್ಕೆ ಒಳ್ಳೆಯದಾಗುವ ಕೆಲಸ ಮಾಡುತ್ತಿದ್ದು, ಅವರಿಗೆ ಯಶಸ್ಸು ಸಿಗಲಿ ಎಂದು ಹರಸಿದರು.

ಮುಖಂಡರಾದ ನಿಂಗಪ್ಪ ಕುರಬೇಟ, ಅಬ್ದುಲ್​ ಮಿರ್ಜಾನಾಯಕ. ಗ್ರಾಪಂ ಅಧ್ಯ ಬಸವರಾಜ ಭೂತಾಳಿ, ಕಾಮನಕಟ್ಟಿ ಗ್ರಾಪಂ ಅಧ್ಯ ಹನುಮಂತ ಮಳ್ಳಿ, ಜಿಪಂ ಮಾಜಿ ಸದಸ್ಯರಾದ ಗೋವಿಂದ ಕೊಪ್ಪದ, ರಂಗಪ್ಪ ಇಟ್ಟನವರ, ಉಮೇಶ ದೇಸಾಯಿ, ವೀರಸಂಗಯ್ಯಾ ಬಾಗೋಜಿಮಠ, ರಾಮನಗೌಡ ಬಿರಾದಾರ, ಗೌಡಪ್ಪ ಗುರಡ್ಡಿ, ಮಲ್ಲಪ್ಪ ಚೆಕ್ಕೆನ್ನವರ, ರಾಜುಗೌಡ ಪಾಟೀಲ, ಅರಬಾವಿ ಬಿಜೆಪಿ ಮಂಡಲ ಅಧ್ಯ ಮಹಾದೇವ ಶೆಕ್ಕಿ, ಬಸವರಾಜ ಬಾಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net