ಅರೇಹಳ್ಳಿಯಲ್ಲಿ ವನ ಮಹೋತ್ಸವ

24blrp6
Published on

ಬೇಲೂರು : ತಾಲೂಕಿನ ಅರೇಹಳ್ಳಿ ಸರ್ಕಾರಿ ಉರ್ದು ಶಾಲೆಯ ಆವರಣ ಲಯನ್ಸ್ ಕ್ಲಬ್‌ನಿಂದ ಗುರುವಾರ ವಿವಿಧ ಗಿಡಗಳನ್ನು ನೆಡುವ ಮೂಲಕ ವನಮಹೋತ್ಸವ ಆಚರಿಸಲಾಯಿತು.ಅರೇಹಳ್ಳಿ ಲಯನ್ಸ್ ಸಂಸ್ಥೆ ಅಧ್ಯಕ್ಷೆ ರಶ್ಮಿ ಸೋಮಯ್ಯ ಮಾತನಾಡಿ, ಪರಿಸರ ಸಂರಕ್ಷಣೆ ನಮ್ಮೆಲ್ಲ ಹೊಣೆಯಾಗಿದೆ ಎಂದರು. ನಿಸರ್ಗವನ್ನು ಸಂರಕ್ಷಿಸಿದರೆ ಮಾತ್ರ ನಾವು ಆರೋಗ್ಯಕರ ವಾತಾವರಣದಲ್ಲಿ ಇರಲು ಸಾಧ್ಯ. ಇಲ್ಲದಿದ್ದಲ್ಲಿ ವಿಷಯುಕ್ತ ಗಾಳಿಯನ್ನೇ ಸೇವಿಸಬೇಕಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳಲ್ಲಿ ಪರಿಸರದ ಕಾಳಜಿ ಮೂಡಿಸುವ ಉದ್ದೇಶದಿಂದ ನಮ್ಮ ಸಂಸ್ಥೆ ಗಿಡ ನೆಡಲು ವಿಶೇಷ ಆದ್ಯತೆ ನೀಡುತ್ತಿದೆ ಎಂದರು.

ಸಾಕಷ್ಟು ಶಾಲಾ ಕಾಲೇಜುಗಳ ಆವರಣ ಗಿಡಗಳನ್ನು ನೆಡಲಾಗಿದೆ. ಶಾಲಾ ಆವರಣದಲ್ಲಿರುವ ಗಿಡಗಳ ಬಗ್ಗೆ ನಿಗಾ ವಹಿಸಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಬೇಸಿಗೆ ಸಂದರ್ಭ ನೀರಿ ಹಾಕಬೇಕು ಎಂದು ಅವರು ಮನವಿ ಮಾಡಿದರು. ಲಯನ್ಸ್ ಸಂಸ್ಥೆೆ ಪ್ರಾಂತೀಯ ಮಾಜಿ ಅಧ್ಯಕ್ಷ ರಾಬಿ ಸೋಮಯ್ಯ, ಕೋಶಾಧಿಕಾರಿ ಸೌಜನ್ಯಾ, ಸದಸ್ಯರಾದ

ಶೋಭಾ, ಶ್ವೇತಾ, ಪ್ರವೀಣ್, ಸಂತೋಷ್, ಲಿಖಿತ್, ರಮೇಶ್, ಉರ್ದು ಶಾಲೆಯ ಶಿಕ್ಷಕಿಯರು ಹಾಗೂ ವಿದ್ಯಾರ್ಥಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net