ತೋಟಪಟ್ಟಿ ರಸ್ತೆ ಸುಧಾರಣೆ

8Rayabag1
Published on

Plantation, road improvement

ರಾಯಬಾಗ: ರೈತರು ಬೆಳೆದ ಬೆಳೆ ಸಕಾಲಕ್ಕೆ ಮಾರುಕಟ್ಟೆಗೆ ತಲುಪಿಸಲು ರೈತರ ತೋಟಪಟ್ಟಿ ರಸ್ತೆಗಳನ್ನು ಸುಧಾರಿಸಲಾಗುತ್ತಿದೆ ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.

ತಾಲೂಕಿನ ಬಾವನ ಸೌಂದತ್ತಿ ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾಡಾ ಯೋಜನೆ ಅಡಿಯಲ್ಲಿ ಮಂಜೂರಾದ 30 ಲಕ್ಷ ರೂ. ಅನುದಾನದಲ್ಲಿ ಹಳೇ ದಿಗ್ಗೆವಾಡಿ ಮುಖ್ಯ ರಸ್ತೆಯಿಂದ ಪೋಪಟ ಕೂಗೆ ತೋಟದ ವರೆಗೆ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಕ್ಷೇತ್ರದ ಎಲ್ಲ ರಸ್ತೆಗಳು ಸುಧಾರಿಸಲಾಗುವುದು ಎಂದರು.

ತಾತ್ಯಾಸಾಹೇಬ ಕಾಟೆ, ರಾಮಚಂದ್ರ ಕಾಟೆ, ಅನಿಲ ಹಂಜೆ, ಅಜಿತ್‌ಖೇಮಲಾಪುರೆ, ಚಿದಾನಂದ ಮಂಗಸೂಳಿ, ದಶರಥ ಕಾಟೆ, ರಮಜಾನ್ ಮಕಾಂದಾರ, ಶಿವಾಜಿ ಕಾಟೆ, ಪೋಪಟ ಕೂಗೆ, ದೇವು ಮಾಂಗ, ರಾಜು ಖಾಂಡೇಕರ, ಸುನೀಲ ಶಿಂದೆ, ಶ್ರೀಕಾಂತ ಮಂಗಸೂಳೆ, ಅಜಿತ ಕುಂಬಾರ, ಸುಭಾಷ ಹಂಜೆ, ಮಹಾವೀರ ಹಂಜೆ, ಸತ್ತೆಪ್ಪ ಚಂಪು, ಅಜಿತ ದೇಸಾಯಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net