ಅಜ್ಞಾನವೆಂಬ ಕಳೆ ಕೀಳಬೇಕು

Plantation program in nelamangala
Plantation program in nelamangala
Published on

ವನಕಲ್ಲು ಮಲ್ಲೇಶ್ವರ ಮಠದ ಡಾ.ಶ್ರೀ ಬಸವರಮಾನಂದ ಸ್ವಾಮೀಜಿ ಅಭಿಪ್ರಾಯ


ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಮಕ್ಕಳಂತೆ ಪ್ರಕೃತಿಯನ್ನು ನೋಡಿಕೊಂಡಲ್ಲಿ ಉತ್ತಮ ವಾತಾವರಣ ನಿರ್ಮಾಣ ಮಾಡಲು ಸಾಧ್ಯ ಎಂದು ವನಕಲ್ಲು ಮಲ್ಲೇಶ್ವರ ಮಠದ ಡಾ.ಶ್ರೀ ಬಸವರಮಾನಂದ ಸ್ವಾಮೀಜಿ ತಿಳಿಸಿದರು.
ನಗರಸಭೆ ವ್ಯಾಪ್ತಿಯ ಕೆಂಪಲಿಂಗನಹಳ್ಳಿಯ ಬೆನಕ ಬಡಾವಣೆಯ ಉದ್ಯಾನವನದಲ್ಲಿ ಬಡಾವಣೆ ನಿವಾಸಿಗಳು ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಗಿಡ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಕೃತಿಯಲ್ಲಿ ಉತ್ತಮ ಗಿಡಗಳನ್ನು ಬೆಳೆಸಲು ಕಳೆಯನ್ನು ತಗೆದು ಹಾಕಬೇಕು. ಅದರಂತೆ ಜೀವನದಲ್ಲಿ ಅಜ್ಞಾನ ಎಂಬ ಕಳೆಯನ್ನು ತಗೆದು ಹಾಕಲು ವಿದ್ಯೆ ಕಲಿಯಬೇಕು. ಪ್ರಸ್ತುತ ಸಮಾಜ ಪ್ರಕೃತಿಯ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದ್ದು, ಪ್ರಕೃತಿ ರಕ್ಷಣೆ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕರ ಮೇಲಿದೆ ಎಂದರು.
ಪರಿಸರದೊಂದಿಗೆ ಅತಿಹೆಚ್ಚು ವಿಶ್ವಾಸವಿಟ್ಟುಕೊಂಡು ಸಂರಕ್ಷಣೆಗೆ ಶ್ರಮಿಸುತ್ತಿದ್ದು, ವ್ಯಕ್ತಿಗಳ ಸಾವಿನ ಸಂಖ್ಯೆ ಬಹಳ ಕಡಿಮೆ. ಅದ್ದರಿಂದ ಅರಣ್ಯ ಇಲಾಖೆ ತಾಲೂಕಿನಲ್ಲಿ ಗಿಡಗಳನ್ನು ಉತ್ಪಾದನೆ ಮಾಡುವ ಕಾರ್ಖಾನೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಪ್ರತಿಯೊಬ್ಬ ಮನೆ ಮುಂಭಾಗದ ಕೈತೋಟದಲ್ಲಿ ಗಿಡ ಮರ ಬೆಳೆಸುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದರು.
ನಗರಸಭೆ ಹೆಚ್ಚುವರಿ ಸದಸ್ಯ ಮುನಿರಾಜು ಮಾತನಾಡಿ, ಬೆನಕ ಬಡಾವಣೆಯಲ್ಲಿ ಸುಮಾರು 1 ಎಕರೆ ಪ್ರದೇಶ ಉದ್ಯಾನವನ ಜಾಗವಿದ್ದು, ಬಡಾವಣೆ ನಿವಾಸಿಗಳು ಹಾಗೂ ನಗರಸಭೆ, ಅರಣ್ಯ ಇಲಾಖೆ ಸಹಕಾರದಿಂದ ಉದ್ಯಾನವನ ಅಭಿವೃದ್ಧಿ ಕಾರ್ಯ ಮಾಡಲಾಗುತ್ತಿದೆ. ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆ ಮುಂದಾಗುವ ಮೂಲಕ ಮುಂದಿನ ಪೀಳಿಗೆ ಮಂದಿಗೆ ಸ್ವಚ್ಛ ಹಾಗೂ ಪರಿಶುದ್ಧ ವಾತಾವರಣ ನಿರ್ಮಾಣ ಮಾಡಿಕೊಡಬೇಕಿದೆ ಎಂದರು.
ಅರಣ್ಯ ಇಲಾಖೆಯಿಂದ 150ಕ್ಕೂ ಹೆಚ್ಚು ವಿವಿಧ ಬಗೆಯ ಗಿಡ ನೆಡಲಾಯಿತು. ಜತೆಗೆ ಬಡಾವಣೆಯ ಹಾಗೂ ಸಂದೀಪ್ ಸೇವಾ ನಿಲಯಂನ 60ಕ್ಕೂ ಹೆಚ್ಚು ಮಕ್ಕಳಿಗೆ ನೋಟ್‌ಬುಕ್ ವಿತರಣೆ ಹಾಗೂ ಕಲಿಕಾ ಸಾಮಗ್ರಿ ವಿತರಿಸಲಾಯಿತು.
ಉಪವಲಯ ಅರಣ್ಯಾಧಿಕಾರಿ ರುದ್ರಮೂರ್ತಿ, ಗ್ರಾಪಂ ಅಧ್ಯಕ್ಷ ಹನುಮಂತರಾಜು, ಮಾಜಿ ಸದಸ್ಯ ವೆಂಕಟೇಶ್, ಕರವೇ ತಾಲೂಕು ಅಧ್ಯಕ್ಷ ಸುರೇಶ್, ಕಾರ್ಮಿಕ ಘಟಕದ ಅಧ್ಯಕ್ಷ ಯಜಮಾನ್ ಉಮೇಶ್, ವಿದ್ಯಾರ್ಥಿ ಘಟಕ ಅಧ್ಯಕ್ಷ ಮಂಜುನಾಥ್‌ಗೌಡ, ಸಂದೀಪ್ ಸೇವಾ ನಿಲಯಂ ಸಂಸ್ಥೆ ಸಂಸ್ಥಾಪಕ ನಿರ್ದೇಶಕಿ ಲಿಲ್ಲಿಸಾಮ್ಯುಯಲ್, ಕಾರ್ಯದರ್ಶಿ ಸಾಮ್ಯುಯಲ್ ಪ್ರಭಾಕರ್, ಮುಖಂಡರಾದ ಬಸವರಾಜು, ಅಶೋಕ್, ಚಂದ್ರಪ್ಪ, ಗೋವಿಂದರಾಜು, ಎನ್.ನಾಗರಾಜು, ಚಲುವರಾಜು, ರಾಮಚಂದ್ರಪ್ಪ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net