ಮಹಾವಿಷ್ಣು ಕ್ಷೇತ್ರದಲ್ಲಿ ಗಿಡ ನೆಡುವ ಕಾರ್ಯಕ್ರಮ

New Project (6)
Published on

ಕಾಸರಗೋಡು: ಪೂಚಕ್ಕಾಡು ಶ್ರೀ ಮಹಾವಿಷ್ಣು ದೇವಾಲಯದ ವಠಾರದಲ್ಲಿ ವಿವಿಧ ಪ್ರಭೇದಗಳ ಔಷಧೀಯ ಗಿಡ ನೆಡಲಾಯಿತು.

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕೀಕಾನ ವೃಂದಾವನ ಬಾಲಗೋಕುಲದ ಆಶ್ರಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪರಿಸರ ಸಂರಕ್ಷಣೆ ಅಂಗವಾಗಿ ಸಹಿ ಸಂಗ್ರಹ ಅಭಿಯಾನ ಹಮ್ಮಿಕೊಳ್ಳಲಾಯಿತು.

ದೇವಾಲಯದ ಆಡಳಿತ ಸಮಿತಿ ಕೋಶಾಧಿಕಾರಿ ರವಿ ವರ್ಮ ಸಸಿ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಶ್ರೀನಿ ಜಿಜೇಶ್ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಸತೀಶ್ ಕಾವಾಡಿ, ರಾಜೇಶ್ ಕೀಕಾನ, ವಿಜಯನ್, ಸುಜಾತಾ, ರಮ್ಯಾ, ವನಶ್ರೀ, ಪ್ರತಿಭಾ, ಪ್ರೀತಿ ಉಪಸ್ಥಿತರಿದ್ದರು. ಬಾಲ ಗೋಕುಲದ ರಕ್ಷಾಧಿಕಾರಿ ನಿರೀಕ್ಷಾ ಸ್ವಾಗತಿಸಿದರು. ಶ್ರೀಲಕ್ಷ್ಮೀ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net