ಕೋದಂಡರಾಮ ದೇವಸ್ಥಾನದಲ್ಲಿ ಗಿಡ ನಾಟಿ

naati
ಶಂಭೂರಿನ ಶೌರ್ಯ ವಿಪತ್ತು ನಿರ್ವಹಣ ಘಟಕದ ವತಿಯಿಂದ ನರಿಕೊಂಬು ಗ್ರಾಮದ ನಾಟಿ ಶ್ರೀ ಕೋದಂಡರಾಮ ದೇವಸ್ಥಾನದಲ್ಲಿ ಗಿಡ ನಾಟಿ ಕಾರ್ಯಕ್ರಮ ನಡೆಯಿತು.
Published on

ಬಂಟ್ವಾಳ: ಶಂಭೂರಿನ ಶೌರ್ಯ ವಿಪತ್ತು ನಿರ್ವಹಣಾ ಘಟಕದ ವತಿಯಿಂದ ನರಿಕೊಂಬು ಗ್ರಾಮದ ನಾಟಿ ಶ್ರೀ ಕೋದಂಡರಾಮ ದೇವಸ್ಥಾನದಲ್ಲಿ ಗಿಡ ನಾಟಿ ಕಾರ್ಯಕ್ರಮ ನಡೆಯಿತು.

ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಪುರುಷೋತ್ತಮ್ ಸಾಲಿಯಾನ್ ನರಿಕೊಂಬು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತನ್ನ ಗ್ರಾಮ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಆಗುವ ವಿಪತ್ತಿನ ಸಂದರ್ಭ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತೆ ಶುಭ ಹಾರೈಸಿದರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಬಾಲಕೃಷ್ಣ ಕಾರ್ಯಕ್ರಮದ ಉದ್ದೇಶದ ಬಗ್ಗೆ ಮಾಹಿತಿ ನೀಡಿದರು.

ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಮೋಹಿನಿ, ಸದಸ್ಯ ಕಿಶೋರ್ ಶೆಟ್ಟಿ, ಜನ ಜಾಗೃತಿ ವೇದಿಕೆ ಸದಸ್ಯ ಪುರುಷೋತ್ತಮ ನಾಟಿ, ಒಕ್ಕೂಟ ಅಧ್ಯಕ್ಷ ಕೃಷ್ಣಪ್ಪ ನಾಯ್ಕ, ವಲಯ ಮೇಲ್ವಿಚಾರಕಿ ಅಮಿತಾ, ಸೇವಾ ಪ್ರತಿನಿಧಿ ಲಕ್ಷ್ಮೀ ಹಾಗೂ ಶೌರ್ಯ ಘಟಕದ ಎಲ್ಲ ಸ್ವಯಂಸೇವಕರು ಸಂಘದ ಸದಸ್ಯರು ಭಾಗವಸಿದರು. ದೇವಸ್ಥಾನದಲ್ಲಿ ಅಡಕೆ, ತೆಂಗು, ಬಾಳೆ ಹಾಗೂ ಹೂವಿನ ಗಿಡ ನಾಟಿ ಮಾಡಲಾಯಿತು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net