ಗಿಡ ನೆಡುವ ಅಭಿಯಾನ

salu
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ದೇವನಹಳ್ಳಿ ತಾಲೂಕು ಕಾರಹಳ್ಳಿ ಗ್ರಾಮದ ಬಳಿಯ ಬಿಎಸ್‌ಎ್ ಕ್ಯಾಂಪಸ್‌ನಲ್ಲಿ ಹೊಸದಾಗಿ 8.500 ಗಿಡಗಳನ್ನು ನೆಡುವುದರ ಜತೆಗೆ ಆ ಪ್ರದೇಶಕ್ಕೆ ಸಾಲುಮರದ ತಿಮ್ಮಕ್ಕ ವನ ಎಂದು ನಾಮಕರಣ ಮಾಡಲಾಗಿದೆ.ಬಿಎಸ್‌ಎ್ ಗೋಕುಲ್ ದಾಸ್ ಎಕ್ಸ್‌ಪೋರ್ಟ್ ಫೌಂಡೇಶನ್ ಮತ್ತು ಕ್ಯಾಚ್ ಫೌಂಡೇಶನ್ ಸಂಯುಕ್ತಾಶ್ರಯದಲ್ಲಿ ಕಾರಹಳ್ಳಿಯ ಬಿಎಸ್‌ಎ್ ಅಧೀನದಲ್ಲಿರುವ ಗುಡ್ಡ ಪ್ರದೇಶದಲ್ಲಿ ಹಮ್ಮಿಕೊಂಡಿದ್ದ ಗಿಡ ನೆಡುವ ಕಾರ್ಯಕ್ರಮದಲ್ಲಿ 8.500 ವಿವಿಧ ಜಾತಿಯ ಗಿಡ ನೆಡುವ ಕಾರ್ಯಕ್ರಮಕ್ಕೆ ಶತಾಯುಷಿ ಸಾಲುಮರದ ತಿಮ್ಮಕ್ಕ ಚಾಲನೆ ನೀಡಿದರು.

ಇತ್ತೀಚೆಗೆ ಸಾರ್ವಜನಿಕರಲ್ಲಿ ಪ್ರಕೃತಿ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಲಾಗುತ್ತಿದ್ದು, ಪರಿಸರ ಉಳಿಸುವ ನಿಟ್ಟಿನಲ್ಲಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು ರೂಪಿಸುತ್ತಿರುತ್ತಾರೆ ಎಂದು ಬಿಎಸ್‌ಎ್ ಅಧಿಕಾರಿ ಡಿ.ಕೆ.ಯಾದವ್ ಶ್ಲಾಘಿಸಿದರು. ಬಿಎಸ್‌ಎ್ ಕ್ಯಾಂಪಸ್‌ನಲ್ಲಿ 8.500 ಗಿಡಗಳನ್ನು ನೆಟ್ಟು ಬೆಳೆಸುವ ಅಭಿಯಾನಕ್ಕೆ ಚಾಲನೆ ದೊರೆತಿದ್ದು ಸಮಾಜ ಮುಖಿ ಸಂಸ್ಥೆಗಳ ಸಹಯೋಗ ಅತ್ಯಗತ್ಯ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net