ವನಮಹೋತ್ಸವ ಸತ್ಸಂಗ

Published on

ಹುಬ್ಬಳ್ಳಿ: ನಗರದ ಗೋಕುಲ ರಸ್ತೆಯ ವಿವೇಕ ಜಾಗತ ಬಳಗ ಮತ್ತು ಅಮರಗೋಳದ ಶ್ರೀ ರಾಜರಾಜೇಶ್ವರಿ ವಿವಿಧೋದ್ದೇಶಗಳ ಸಹಕಾರ ಸಂದ ಸಂಯುಕ್ತ ಆಶ್ರಯದಲ್ಲಿ ವನಮಹೋತ್ಸವ ಮತ್ತು ಸತ್ಸಂಗ ಕಾರ್ಯಕ್ರಮವನ್ನು ಜುಲೈ 17 ಮಧ್ಯಾಹ್ನ 3ಕ್ಕೆ ಅಮರಗೋಳ ಅಮರೇಶ್ವರ ನಗರದ ಶಿವಪ್ಪ ಶಂ. ಕರಡಿ ಅವರ ಮನೆಯಲ್ಲಿ ಏರ್ಪಡಿಸಲಾಗಿದೆ.

ವಿವೇಕ ಜಾಗತ ಬಳಗದ ಎಲ್-2 ಅಧಿಕಾರಿ ಡಾ. ಪಂಕಜಾ ಬ್ಯಾಕೋಡಿ ಅವರು ಉಪನ್ಯಾಸ ನೀಡುವರು. ಡಿವೈನ್ ಪಾರ್ಕ್ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಮಾಡಲಾಗಿದೆ.

ಶರಣ ಸಾಹಿತಿ ಈ.ಎಸ್. ಇಟಗಿ, ನಿವೃತ್ತ ಪ್ರಾಚಾರ್ಯ ಆರ್.ಎಫ್. ಇಂಚಲ, ಶ್ರೀಶೈಲ ನೀಲಗುಂದ ಅವರ ನೇತೃತ್ವದಲ್ಲಿ ವನಮಹೋತ್ಸವ ಜರುಗಲಿದೆ ಎಂದು ಆಯೋಜಕ ಕಲ್ಲಪ್ಪ ಮರದಣ್ಣವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net