

ವಿಜಯವಾಣಿ ಸುದ್ದಿಜಾಲ ಧಾರವಾಡ
ಧಾರವಾಡ ತಾಲೂಕಿನ ಕುಂಬಾಪುರ ಪ್ರಾದೇಶಿಕ ತೋಟಗಾರಿಕಾ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದಲ್ಲಿ ಜೂ. 18ರಿಂದ 24ರವರೆಗೆ ಸಸ್ಯ ಸಂತೆ ಏರ್ಪಡಿಸಲಾಗಿದೆ. ಸಂತೆಯಲ್ಲಿ ಗುಣಮಟ್ಟದ ಕಸಿ ಮಾಡಿದ ವಿವಿಧ ತಳಿಯ ಹಣ್ಣಿನ ಸಸಿಗಳಾದ ಮಾವು, ಲಿಂಬೆ, ಹುಣಸೆ, ಕವಳೆ, ಚಿಕ್ಕು, ಪೇರಲ, ನೇರಳೆ ಇತ್ಯಾದಿ ಸಸಿಗಳು ಯೋಗ್ಯ ದರದಲ್ಲಿ ಮಾರಾಟಕ್ಕೆ ಲಭ್ಯವಿದ್ದು, ರೈತರು ಹಾಗೂ ಜನರು ಪ್ರಯೋಜನ ಪಡೆಯಬೇಕು ಎಂದು ಪ್ರಕಟಣೆ ತಿಳಿಸಿದೆ.