ಗಿಡ, ಮರ ಬೆಳಸಲು ಎಲ್ಲರೂ ಸಹಕರಿಸಿ - ತಾಪಂ ಮಾಜಿ ಅಧ್ಯಕ್ಷ ಅನಿಸಿಕೆ

Talakeri Parisara dina
ಯಲಬುರ್ಗಾ ತಾಲೂಕಿನ ಬಳೂಟಗಿ ಗ್ರಾಮದ ಸರ್ಕಾರಿ ಪಿಯು ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ತಾಪಂ ಮಾಜಿ ಅಧ್ಯಕ್ಷ ವೀರನಗೌಡ ಬಳೂಟಗಿ ಸೋಮವಾರ ಚಾಲನೆ ನೀಡಿದರು.
Published on

ಯಲಬುರ್ಗಾ: ನಮಗೆ ಉಸಿರಾಡಲು ಆಕ್ಸಿಜನ್ ನೀಡುವ ಮರಗಳನ್ನು ಉಳಿಸಿ ಬೆಳಸುವುದು ನಮ್ಮೆಲ್ಲರ ಕರ್ತವ್ಯ ಎಂದು ತಾಪಂ ಮಾಜಿ ಅಧ್ಯಕ್ಷ ವೀರನಗೌಡ ಬಳೂಟಗಿ ಹೇಳಿದರು.

ತಾಲೂಕಿನ ಬಳೂಟಗಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಕೃಷಿ ಇಲಾಖೆ, ಗ್ರಾಪಂ, ಅರಣ್ಯ ಇಲಾಖೆಯಿಂದ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಗಿಡ, ಮರ ಬೆಳಸುವ ಕಾರ್ಯ ಮನಸ್ಸಿನಿಂದಲೇ ಆರಂಭವಾಗಬೇಕು. ಪರಿಸರ ಅವನತಿ ಅಂಚಿನಲ್ಲಿದ್ದರೂ ನಾವು ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಬಹಳ ಕಷ್ಟ ಎದುರಿಸಬೇಕಾಗುತ್ತದೆ ಎಂದರು.

ಸಹಾಯಕ ಕೃಷಿ ನಿರ್ದೇಶಕ ಪ್ರಾಣೇಶ ಹಾದಿಮನಿ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ನಗೀನಾಬೇಗಂ ನೂರ್‌ಬಾಷಾ, ಜಿಲ್ಲಾ ಕೃಷಿ ಉಪ ನಿರ್ದೇಶಕ ಸಹದೇವ, ಜಲಾನಯನ ಮತ್ತು ಕೃಷಿ ತಂತ್ರಜ್ಞಾನ ಸಂಸ್ಥೆ ಅಧಿಕಾರಿ ವೀರಣ್ಣ ಕಮತರ, ಕೃಷಿ ಅಧಿಕಾರಿಗಳಾದ ಇಕ್ಬಾಲ್, ಬಸಲಿಂಗಪ್ಪ, ಪಿಡಿಒ ರಮೇಶ ಹೊಸಮನಿ, ಮುಖಂಡರಾದ ಶಿವಪ್ಪ ತೊಗರಿ, ಶಿವು ರಾಜೂರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net